ಮಹೀಂದ್ರಾ & ಮಹೀಂದ್ರಾ ಕಂಪನಿ ತನ್ನದೇ ಆದ ಸುರಕ್ಷತಾ ದಾಖಲೆ ಮುರಿದಿದೆ. ಇತ್ತೀಚೆಗೆ ಬಿಡುಗಡೆಯಾದ XUV700, 5 ಸ್ಟಾರ್ ಗ್ಲೋಬಲ್ NCAP ರೇಟಿಂಗ್ ಪಡೆದಿದೆ. ಮಕ್ಕಳು ಹಾಗೂ ವಯಸ್ಕರ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತದ ವಾಹನಗಳಲ್ಲೇ ಇದಕ್ಕೆ ಹೆಚ್ಚು ರೇಟಿಂಗ್ ಸಿಕ್ಕಿದೆ. ಒಟ್ಟು 66 ಅಂಕಗಳಲ್ಲಿ XUV700 ಗೆ 57.69 ಅಂಕ ಸಿಕ್ಕಿದೆ. ಇದು ಭಾರತದ ವಾಹನಕ್ಕೆ ಸಿಕ್ಕ ಅತಿ ಹೆಚ್ಚು ಸುರಕ್ಷತಾ ಸ್ಕೋರ್ ಎಂದು ಕಂಪನಿ ಹೇಳಿದೆ.
ವಯಸ್ಕರ ಸುರಕ್ಷತಾ ಸ್ಕೋರ್ ನಲ್ಲಿ XUV700 ಗೆ 17 ಅಂಕದಲ್ಲಿ 16.03 ಅಂಕ ಸಿಕ್ಕಿದೆ. ಮಕ್ಕಳ ಸುರಕ್ಷತಾ ಸ್ಕೋರ್ 49 ಅಂಕದಲ್ಲಿ 41.66 ಅಂಕ ಸಿಕ್ಕಿದೆ. ಇದು ಭಾರತದಲ್ಲಿ ಇದುವರೆಗೆ ಗ್ಲೋಬಲ್ NCAP ನಿಂದ ಪರೀಕ್ಷಿಸಲ್ಪಟ್ಟ ಎಲ್ಲಾ ವಾಹನಗಳಲ್ಲಿ ಅತ್ಯಧಿಕವಾಗಿದೆ. ಮಹೀಂದ್ರ XUV700 ಗಾಗಿ ಅಧಿಕೃತ ಗ್ಲೋಬಲ್ NCAP ಪರೀಕ್ಷೆಯನ್ನು ಅಕ್ಟೋಬರ್ 2021 ರಲ್ಲಿ ಜರ್ಮನಿಯಲ್ಲಿ ನಡೆಸಲಾಯಿತು.
ಕಾರ್ತಿಕ ಹುಣ್ಣಿಮೆ ದಿನ ದೀಪದಾನ: ದೀಪ ಪೂಜೆಗಿದೆ ʼಮಹತ್ವʼ
XUV700, ಕಾರ್ಯಕ್ಷಮತೆ ಮತ್ತು ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಗ್ಲೋಬಲ್ NCAP ನೀಡಿದ ಸ್ಕೋರ್‌ಗಳ ಆಧಾರದ ಮೇಲೆ, ಇದೀಗ ಭಾರತದಲ್ಲಿ ಹೆಚ್ಚು ಸುರಕ್ಷಿತ ವಾಹನವೆಂದು ಒಪ್ಪಿಕೊಳ್ಳಲಾಗಿದೆ.
ಆಗಸ್ಟ್ 2021 ರಲ್ಲಿ XUV700 ಬಿಡುಗಡೆಯಾಗಿದೆ. ಇದ್ರ ಆರಂಭಿಕ ಬೆಲೆ 12.49 ಲಕ್ಷ ರೂಪಾಯಿ.