ಚಿಪ್ ಶಾರ್ಟೇಜ್‌ನಿಂದಾಗಿ ಕಾರು ತಯಾರಿಕಾ ಕಂಪನಿಗಳಿಗೆ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಸಮಸ್ಯೆಯಾಗುತ್ತಿದೆ. ಹಾಗಾಗಿಯೇ ಹೆಚ್ಚಿನ ಕಂಪನಿಗಳು ಚಿಪ್ ಶಾರ್ಟೇಜ್‌ನಿಂದಾಗಿ ಹೊಸ ಕಾರುಗಳ ಫೀಚರ್‌ಗಳಿಗೆ ಕತ್ತರಿ ಹಾಕಿವೆ. ಭಾರತದಲ್ಲೂ ಈ ಸಮಸ್ಯೆ ಕಾಡುತ್ತಿದ್ದು, ಕಾರು ಉತ್ಪಾದನೆಯಲ್ಲಿ ದೇಶಾದ್ಯಂತ ಹೆಸರು ಗಳಿಸಿರುವ ಮಹೀಂದ್ರಾ ಕಂಪನಿಯೇ ಕೆಲ ಫೀಚರ್‌ಗಳನ್ನು ತೆಗೆದುಹಾಕಿದೆ.
ಮಹೀಂದ್ರಾ ಎಸ್‌ಯುವಿ 700 ಕಾರು ಕಳೆದ ವರ್ಷದ ಆಗಸ್ಟ್‌ನಲ್ಲಿಯೇ ಬಿಡುಗಡೆ ಮಾಡಿದ್ದು, ಲಕ್ಷಾಂತರ ಜನ ಹೊಸ ಕಾರನ್ನು ಸ್ವಾಗತಿಸಲು ಬುಕ್ ಮಾಡಿ ಕಾಯುತ್ತಿದ್ದಾರೆ. ಹೀಗೆ ಬುಕ್ ಮಾಡಿ ಕಾಯುತ್ತಿರುವ ಗ್ರಾಹಕರಿಗೆ ಕಂಪನಿಯು ಫಾರ್ಮ್ ಒಂದನ್ನು ಕಳುಹಿಸಿದ್ದು, ಅದಕ್ಕೆ ಸಮ್ಮತಿ ಕೇಳಿದೆ. ಚಿಪ್ ಶಾರ್ಟೇಜ್‌ನಿಂದಾಗಿ ಕಾರಿನ ಮುಂಭಾಗದಲ್ಲಿ ಸೀಕ್ವೆನ್ಶಿಯಲ್ ಟರ್ನ್ ಇಂಡಿಕೇಟರ್ ಹಾಗೂ ದ್ವಿತೀಯ ಕೀ ಸೇರಿ ಕೆಲ ಫೀಚರ್‌ಗಳು ಇರುವುದಿಲ್ಲ ಎಂದು ತಿಳಿಸಿದೆ.
ಟಾಟಾ ಪಂಚ್ ಮೈಕ್ರೋ SUV ಗೆ ರಗಡ್ ಲುಕ್ ನೀಡಿದ ಡಿಜಿಟಲ್ ಕಲಾವಿದ…!
ಮಹೀಂದ್ರಾ ಎಕ್ಸ್‌ಯುವಿ ಎಎಕ್ಸ್ 5, ಎಎಕ್ಸ್ 7 ಹಾಗೂ ಎಎಕ್ಸ್ 7 ಎಲ್ ಮಾದರಿಯ ಕಾರುಗಳಿಗೆ ಮಾತ್ರ ನೂತನ ಫೀಚರ್‌ಗಳು ಲಭ್ಯವಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ. ಅಲ್ಲದೆ, ಚಿಪ್ ಶಾರ್ಟೇಜ್‌ನಿಂದಾಗಿ ಇವೆಲ್ಲ ನೀಡಲು ಆಗುವುದಿಲ್ಲ, ಇದಕ್ಕೆ ಗ್ರಾಹಕರ ಸಮ್ಮತಿ ಕಡ್ಡಾಯವಾಗಿದೆ ಎಂದೂ ತಿಳಿಸಿದೆ. ಒಟ್ಟಿನಲ್ಲಿ ಮಹೀಂದ್ರಾ ಎಕ್ಸ್‌ಯುವಿ ಕಾರು ಬುಕ್ ಮಾಡಿ ಕೆಲ ತಿಂಗಳಿಂದ ಕಾಯುತ್ತಿರುವ ಗ್ರಾಹಕರಿಗೆ ಈಗ ಒಂದಷ್ಟು ಫೀಚರ್‌ಗಳು ಸಹ ಲಭ್ಯವಾಗುವುದಿಲ್ಲ ಎಂದು ತಿಳಿದು ಅಸಮಾಧಾನ ಉಂಟಾಗಿದೆ. ಆದರೆ, ಈಗಾಗಲೇ ಇದೇ ಸಮಸ್ಯೆಯಿಂದ ವೋಕ್ಸ್‌ವ್ಯಾಗನ್ ಹಾಗೂ ಸ್ಕೋಡಾ ಕಂಪನಿಯ ಕಾರುಗಳು ಸಹ ಹಲವು ಫೀಚರ್ ತೆಗೆದಿವೆ.