ಆಟೋಮೊಬೈಲ್ ಆಸಕ್ತರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಮಹಿಂದ್ರಾ ಎಕ್ಸ್‌ಯುವಿ 700 ಎಸ್‌ಯುವಿ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಆತ್ಯಾಧುನಿಕ ಫೀಚರ್‌ಗಳಿಂದಾಗಿ ಟ್ರೆಂಡ್ ಸೃಷ್ಟಿಸಿರುವ ಎಕ್ಸ್‌ಯುವಿ ಬಿಡುಗಡೆಯಾದ ಎರಡೇ ವಾರಗಳಲ್ಲಿ 65,000 ಸಂಖ್ಯೆಯಲ್ಲಿ ಅದಾಗಲೇ ಬುಕಿಂಗ್ ಆಗಿದೆ.
ಅಕ್ಟೋಬರ್ 7, 2021ರಂದು ಬುಕಿಂಗ್ ಆರಂಭಗೊಂಡಾಗಿನಿಂದ ಇಷ್ಟು ಸಂಖ್ಯೆಯಲ್ಲಿ ಬುಕಿಂಗ್ ಆಗಿರುವುದು ದೇಶದ ಯಾವುದೇ ಆಟೋಮೊಬೈಲ್ ಉತ್ಪಾದಕರೂ ಮಾಡಿರದ ಸಾಧನೆಯಾಗಿದೆ.
BREAKING NEWS: ವಾಹನ ಸವಾರರಿಗೆ ಮತ್ತೆ ಶಾಕ್; ಇಂದೂ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ
12.49 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಆರಂಭಗೊಳ್ಳುವ ಕಾರಿನ ಪೆಟ್ರೋಲ್ ಅವತರಣಿಕೆಯ ಡೆಲಿವರಿ ಅಕ್ಟೋಬರ್ 20, 2021ರಿಂದ ಹಾಗೂ ಡೀಸೆಲ್ ವರ್ಶನ್‌ಗಳು ನವೆಂಬರ್ ಕೊನೆಯ ವಾರದಿಂದ ಡೆಲಿವರಿಯಾಗಲಿವೆ.
ಬೆಂಗಳೂರಿನ ಶೋರೂಂ ಒಂದಕ್ಕೆ ಈ ಕಾರು ಬರುತ್ತಲೇ ಮೊದಲ ಲುಕ್ ಕಾಣಲು ಮುಗಿಬಿದ್ದ ಜನರ ಚಿತ್ರಗಳನ್ನು ಮಹಿಂದ್ರಾದ ಟ್ವೀಟರ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಲಾಗಿದೆ.
ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಹೆಚ್ಚಾಗಲಿದೆ ತೆರಿಗೆ ಹೊರೆ
5 ಹಾಗೂ 7 ಸೀಟರ್‌ಗಳಲ್ಲಿ ಬರುವ ಮಹಿಂದ್ರಾ ಎಕ್ಸ್‌ಯುವಿ700, 10-25 ಲಕ್ಷ ರೂ.ಗಳ ನಡುವಿನ ಬೆಲೆಯಲ್ಲಿ ಸಿಗಲಿವೆ. ಎಂಎಕ್ಸ್ ಹೆಸರಿನಲ್ಲಿ ಎಂಟ್ರಿ ಮಟ್ಟ ಹಾಗೂ ಫೀಚರ್ ಭರಿತ ಎಕ್ಸ್ ಸೀರೀಸ್ ಕಾರುಗಳಾದ ಎಎಕ್ಸ್3, ಎಎಕ್ಸ್5 ಮತ್ತು ಎಎಕ್ಸ್7 ಹೆಸರುಗಳಲ್ಲಿ ಎಕ್ಸ್‌ಯುವಿ700 ಲಭ್ಯವಿದೆ. 2.2 ಲೀಟರ್‌ನ ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನ್‌ಗಲ್ಲಿ ಮ್ಯಾನುವಲ್ ಹಾಗೂ ಸ್ವಯಂಚಾಲಿತ ಗೇರ್ ಬಾಕ್ಸ್‌ಗಳ ಆಯ್ಕೆಗಳೂ ಸಹ ಇವೆ.
ಹಬ್ಬದ ಸಂಭ್ರಮ ಮರೆಯಾಗದಂತೆ ‘ಪಟಾಕಿ’ ಸಿಡಿಸಲು ಇಲ್ಲಿದೆ ಟಿಪ್ಸ್
ಸ್ವಾಯತ್ತ ಡ್ರೈವಿಂಗ್ ಫೀಚರ್‌ಗಳಾದ ಲೇನ್ ಕೀಪ್ ಅಸಿಸ್ಟ್, ಸ್ವಯಂ ಚಾಲಿತ ತುರ್ತು ಬ್ರೇಕಿಂಗ್, ಹೊಂದಿಕೊಳ್ಳಬಲ್ಲ ಕ್ರೂಸ್ ನಿಯಂತ್ರಣ ಸೇರಿದಂತೆ ಅನೇಕ ವಿಶಿಷ್ಟ ಫೀಚರ್‌ಗಳನ್ನು ಈ ಹೊಸ ಎಸ್‌ಯುವಿ ಹೊಂದಿದೆ.
ಈ ಹಿಂದೆ ಬಿಡುಗಡೆಯಾದ ಥಾರ್‌ಗೆ ವಿಪರೀತ ಬುಕಿಂಗ್ ಗಳಾಗಿ ಅವುಗಳ ಡೆಲಿವರಿಯನ್ನೇ ವರ್ಷ ಕಳೆದರೂ ಇನ್ನೂ ಪೂರೈಸಲು ಸಾಧ್ಯವಾಗದ ಮಹಿಂದ್ರಾ ಈಗ ಎಕ್ಸ್‌ಯವಿ700 ಕಾರುಗಳ ಭಾರೀ ಬುಕಿಂಗ್ ಗಳನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಾದು ನೋಡಬೇಕಿದೆ.