ದೇಶದಲ್ಲಿ ಪೆಟ್ರೋಲ್- ಡಿಸೇಲ್ ಬೆಲೆ ಏರಿಕೆ ಕಂಡಿದೆ. ಇದ್ರಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ & ಮಹೀಂದ್ರ, ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಜಾಗದಲ್ಲಿ ತನ್ನ ಸ್ಥಾನ ಬಲಪಡಿಸುವ ಯೋಜನೆಗಳನ್ನು ಬಹಿರಂಗಪಡಿಸಿದೆ. 2027 ರ ವೇಳೆಗೆ 16 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಮಹೀಂದ್ರಾ ಘೋಷಿಸಿದೆ.
ದೇಶದ ಜನತೆಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ದರ ಕಡಿಮೆಯಾದ ನಂತ್ರ ಬೇಳೆಕಾಳುಗಳ ಬೆಲೆಯೂ ಇಳಿಕೆ
ಈ ಇವಿಗಳು ಎಸ್‌ಯುವಿ ಮತ್ತು ಲೈಟ್ ಕಮರ್ಷಿಯಲ್ ವೆಹಿಕಲ್ ವರ್ಗದ ವಾಹನಗಳನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ. ಹೊಸದಾಗಿ ಘೋಷಿಸಲಾದ ಎಲೆಕ್ಟ್ರಿಕ್ ವಾಹನಗಳಲ್ಲಿ ಎಂಟು ಎಲೆಕ್ಟ್ರಿಕ್ ಎಸ್‌ಯುವಿ ಇರುತ್ತವೆ ಎಂದು ಮಹೀಂದ್ರಾ ಹೇಳಿದೆ. ಮಹೀಂದ್ರಾ & ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 2027 ರ ವೇಳೆಗೆ 13 ಹೊಸ ಮಾಡೆಲ್ ಬಿಡುಗಡೆಯಾಗಲಿದೆ. ಅದರಲ್ಲಿ ಎಂಟು ಎಲೆಕ್ಟ್ರಿಕ್ ವಾಹನವಾಗಿರುತ್ತದೆ ಎಂದವರು ಹೇಳಿದ್ದಾರೆ.
ಕಾರ್ಮಿಕರ ಖಾತೆಗೆ 3 ಸಾವಿರ ರೂ. ಜಮಾ: ಇಲ್ಲಿದೆ ಮುಖ್ಯ ಮಾಹಿತಿ
ದೇಶೀಯ ವಾಹನ ತಯಾರಕರು 2025 ರಿಂದ 2027 ರ ಅವಧಿಯಲ್ಲಿ ನಾಲ್ಕು ಹೊಸ ಇ-ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಈ ಎಲೆಕ್ಟ್ರಿಕ್ ವಾಹನಗಳಲ್ಲಿ ಕೆಲವು ಸಂಪೂರ್ಣವಾಗಿ ಹೊಸದಾಗಿರುತ್ತವೆ. ಉಳಿದವುಗಳು ಅಸ್ತಿತ್ವದಲ್ಲಿರುವ ವಾಹನಗಳ ಹೊಸ ಅವತಾರಗಳಾಗಿರುತ್ತವೆ ಎಂದು ಜೆಜುರಿಕರ್ ಹೇಳಿದ್ದಾರೆ. ಎಲೆಕ್ಟ್ರಿಕ್ ವಾಹನಗಳಲ್ಲಿ 3,000 ಕೋಟಿ ಹೂಡಿಕೆ ಮಾಡುವ ಉದ್ದೇಶವನ್ನು ಕಂಪನಿ ಪ್ರಕಟಿಸಿದೆ.