alex Certify ಮಹೀಂದ್ರ ಥಾರ್ 4X4 ಅಥವಾ 4X2, ಯಾವ ವೇರಿಯಂಟ್‌ ಬೆಸ್ಟ್…….? ಇಲ್ಲಿದೆ ಬೆಲೆ ಮತ್ತು ವಿಶೇಷತೆಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹೀಂದ್ರ ಥಾರ್ 4X4 ಅಥವಾ 4X2, ಯಾವ ವೇರಿಯಂಟ್‌ ಬೆಸ್ಟ್…….? ಇಲ್ಲಿದೆ ಬೆಲೆ ಮತ್ತು ವಿಶೇಷತೆಗಳ ವಿವರ

ಮಹೀಂದ್ರ ಥಾರ್ ಭಾರತದ ಜನಪ್ರಿಯ ಆಫ್-ರೋಡ್ SUVಗಳಲ್ಲೊಂದು. ಇದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ: 4X2 ವೇರಿಯಂಟ್ ಮತ್ತು 4X4 ವೇರಿಯಂಟ್‌. ಆದರೆ ಇವೆರಡರಲ್ಲಿ ಯಾವುದು ಬೆಸ್ಟ್‌ ಅನ್ನೋ ಗೊಂದಲ ಸಹಜ. 4X4 ಆಗಿದ್ದ ಥಾರ್‌ನ ಒಂದು ರೂಪಾಂತರ ಮಾರುಕಟ್ಟೆಯಲ್ಲಿ ಲಭ್ಯವಿತ್ತು, ಈಗ ಕಂಪನಿ ಇದನ್ನು 4X2 ರೂಪಾಂತರದಲ್ಲಿಯೂ ಬಿಡುಗಡೆ ಮಾಡಿದೆ. ಥಾರ್‌ ಖರೀದಿಸಲು ಯೋಚಿಸುತ್ತಿದ್ದರೆ ಈ ವೇರಿಯಂಟ್‌ಗಳ ವಿಶೇಷತೆ, ಬೆಲೆಗಳ ಸಂಪೂರ್ಣ ವಿವರ ತಿಳಿದುಕೊಳ್ಳಬೇಕು.

ಮಹೀಂದ್ರ ಥಾರ್‌ 4X2

ಇದರ ಬೆಲೆ 9.99 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು ಉತ್ತಮ ಇಂಧನ ದಕ್ಷತೆಯನ್ನು ಹೊಂದಿದೆ. ನಗರಗಳಲ್ಲಿ ಚಲಾಯಿಸಲು ಬೆಸ್ಟ್‌. ನಿರ್ವಹಣಾ ವೆಚ್ಚ ಕೂಡ ಕಡಿಮೆ. ಆದರೆ ಈ ಕಾರಿನಲ್ಲಿ ಆಫ್ ರೋಡಿಂಗ್ ಸಾಮರ್ಥ್ಯ ಕಡಿಮೆ. ಹಿಂದಿನ ಚಕ್ರ ಮಾತ್ರ ಶಕ್ತಿಯನ್ನು ಪಡೆಯುತ್ತದೆ.

ಮಹೀಂದ್ರ ಥಾರ್‌ 4X4

ಈ ಮಾದರಿ ಅತ್ಯುತ್ತಮ ಆಫ್-ರೋಡಿಂಗ್ ಸಾಮರ್ಥ್ಯ ಹೊಂದಿದೆ. ಇದರಲ್ಲಿ ನಾಲ್ಕು ಚಕ್ರಗಳಿಗೂ ಪವರ್ ಸಿಗುತ್ತದೆ. ಕಠಿಣ ರಸ್ತೆಗಳಲ್ಲೂ ಉತ್ತಮ ಎಳೆತದ ಸಾಮರ್ಥ್ಯ ಅದಕ್ಕಿದೆ. ಆದರೆ ಈ ಕಾರಿನ ಬೆಲೆ ಕೊಂಚ ಅಧಿಕ, 13.59 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದರ ಇಂಧನ ದಕ್ಷತೆ ಕಡಿಮೆ ಇದೆ, ಹಾಗಾಗಿ ನಗರದಲ್ಲಿ ಓಡಿಸಲು ಅನುಕೂಲಕರವಾಗಿಲ್ಲ. ಈ ಕಾರಿನ ನಿರ್ವಹಣಾ ವೆಚ್ಚ ಅಧಿಕವಾಗಿದೆ.  ಇವುಗಳಲ್ಲಿ ಯಾವ ರೂಪಾಂತರ ಸೂಕ್ತವಾಗಿದೆ ಎಂಬುದು ಅವರವರ ಅಗತ್ಯತೆಗಳು ಮತ್ತು ಬಜೆಟ್ ಅನ್ನು ಅವಲಂಬಿಸಿರುತ್ತದೆ:

ಆಫ್ ರೋಡಿಂಗ್ ಬಗ್ಗೆ ಒಲವು ಹೊಂದಿದ್ದರೆ 4X4 ರೂಪಾಂತರ ಸೂಕ್ತವಾಗಿರುತ್ತದೆ. ಕಡಿಮೆ ಬೆಲೆಗೆ SUV ಬೇಕು ಎಂದಿದ್ದರೆ, ಹೆಚ್ಚಾಗಿ ನಗರದಲ್ಲಿ ಚಾಲನೆ ಮಾಡಲು 4X2 ರೂಪಾಂತರ ಅತ್ಯುತ್ತಮವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...