ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಇ-ಆಲ್ಫಾ ಕಾರ್ಗೋವನ್ನು ಜನವರಿ 27 ರಂದು ಬಿಡುಗಡೆ ಮಾಡಿರುವ ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ವ್ಯಾಪಕವಾಗಿ ಬೆಳೆಯುತ್ತಿರುವ ಇ-ಕಾರ್ಟ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇ-ಆಲ್ಫಾ ಕಾರ್ಗೋ ಬೆಲೆಯು 1.44 ಲಕ್ಷ ರೂ. ಇದೆ (ಎಕ್ಸ್ ಶೋ ರೂಂ ದೆಹಲಿ).
ಇ-ಆಲ್ಫಾ ಕಾರ್ಗೋ 1.5 kW ಗರಿಷ್ಠ ಶಕ್ತಿಯೊಂದಿಗೆ ಬರುತ್ತದೆ ಮತ್ತು 25 ಕಿಮೀ/ಗಂಟೆಯಷ್ಟು ಗರಿಷ್ಠ ವೇಗವನ್ನು ಪಡೆದುಕೊಳ್ಳಬಹುದಾಗಿದೆ. ಆಫ್-ಬೋರ್ಡ್ 48 V/15 A ಚಾರ್ಜರ್‌ನೊಂದಿಗೆ, ಇ-ಆಲ್ಫಾ ಕಾರ್ಗೋವನ್ನು ಚಾರ್ಜ್ ಮಾಡುವುದು ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡುವಷ್ಟು ಸುಲಭವಾಗಿದೆ ಎಂದು ಕಂಪನಿ ಹೇಳಿದೆ.
ʼಚಳಿಗಾಲʼದಲ್ಲಿ ಊದಿಕೊಳ್ಳುವ ಕೈಕಾಲಿಗೆ ಇಲ್ಲಿದೆ ಮನೆ ಮದ್ದು
“ಪಳೆಯುಳಿಕೆ ಇಂಧನ-ಚಾಲಿತ 3-ಚಕ್ರ ವಾಹನಗಳಿಗೆ ಹೋಲಿಸಿದರೆ ಗಮನಾರ್ಹ ನಿರ್ವಹಣಾ ವೆಚ್ಚದಂಥ ಅನುಕೂಲಗಳ ಕಾರಣದಿಂದಾಗಿ ಕೊನೆಯ ಮೈಲಿ ವಿತರಣಾ ವಿಭಾಗವು ಎಲೆಕ್ಟ್ರಿಕ್ 3-ಚಕ್ರಗಳ ಅತ್ಯುತ್ತಮ ಅಳವಡಿಕೆಯನ್ನು ಕಾಣುತ್ತಿದೆ. ನಾವು ಈ ಕ್ಷೇತ್ರದ ಅಗತ್ಯತೆಯನ್ನು ಪರಿಗಣಿಸಿ ಇ-ಆಲ್ಫಾ ಕಾರ್ಗೋ ಇ-ಕಾರ್ಟ್ ಅನ್ನು ಗ್ರಾಹಕರ ಅವಶ್ಯಕತೆಗಳಿಗೆ ಪ್ರತಿಕ್ರಿಯೆಯಾಗಿ ಪ್ರಾರಂಭಿಸುತ್ತಿದ್ದೇವೆ,” ಎಂದು ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಸಿಇಒ ಸುಮನ್ ಮಿಶ್ರಾ ಹೇಳುತ್ತಾರೆ.
ಡೀಸೆಲ್ ಕಾರ್ಗೋ 3-ವೀಲರ್‌ನ ಮೇಲೆ 60,000 ರೂಪಾಯಿಗಳ ಉಳಿತಾಯದೊಂದಿಗೆ, ಕಾರ್ಗೋ ವಿಭಾಗದಲ್ಲಿ ಸುಸ್ಥಿರ ಮತ್ತು ಮಾಲಿನ್ಯ-ಮುಕ್ತ ಪರಿಹಾರವನ್ನು ಒದಗಿಸುವ ಗುರಿಯನ್ನು ಇ-ಆಲ್ಫಾ ಕಾರ್ಗೋ ಹೊಂದಿದೆ ಎಂದು ಅವರು ಹೇಳಿದ್ದಾರೆ. ಈ ಮಾದರಿಯು 310 ಕೆಜಿಯ ಪೇ ಲೋಡ್ ಹೊರುವ ಸಾಮರ್ಥ್ಯದೊಂದಿಗೆ ಬರುತ್ತದೆ ಮತ್ತು ಒಂದು ಚಾರ್ಜ್ ಮೇಲೆ 80 ಕಿಮೀ ದೂರವನ್ನು ಕ್ರಮಿಸುತ್ತದೆ.
ಪ್ರಮುಖ ಮಹಾನಗರಗಳಲ್ಲಿ ಕೊನೆಯ ಮೈಲಿ ಸಂಪರ್ಕಕ್ಕೆ ಇ-ಆಲ್ಫಾ ಕಾರ್ಗೋ ಸೂಕ್ತವಾಗಿರುತ್ತದೆ. ಇದು ಆಕರ್ಷಕವಾದ ಬಾಹ್ಯ ವಿನ್ಯಾಸದೊಂದಿಗೆ ದೃಢವಾದ ದೇಹವನ್ನು ಹೊಂದಿದೆ. ಇದು ಚಾಲಕರು, ಪ್ರಯಾಣಿಕರಿಗೆ ಅನುಕೂಲವಾಗಬಲ್ಲಷ್ಟು ದೊಡ್ಡ ಕ್ಯಾಬಿನ್ ಜಾಗ ಮತ್ತು ಉತ್ಕೃಷ್ಟವಾದ ಸಸ್ಪೆನ್ಷನ್ ಮತ್ತು ಚಾಸಿ ಹೊಂದಿದೆ.