ಕಳೆದ ವರ್ಷ ಏಪ್ರಿಲ್ 1 ರಂದು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಶುರುವಾಗಿದೆ. ಇದೊಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಇಲ್ಲಿ ಮಹಿಳೆಯರು ಎರಡು ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಮಹಿಳೆಯರಿಗೆ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಇಷ್ಟವಾದಂತೆ ಕಾಣ್ತಿದೆ. ಯಾಕೆಂದ್ರೆ ಈ ಯೋಜನೆಗೆ ಹೂಡಿಕೆ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹಿಂದಿನ ವರ್ಷ ಅಕ್ಟೋಬರ್ ವರೆಗೆ 18 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ.
ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಲ್ಲಿ ಎರಡು ವರ್ಷಗಳವರೆಗೆ ಹಣವನ್ನು ಹೂಡಿಕೆ ಮಾಡಬಹುದು. ಈ ಖಾತೆಯನ್ನು ನೀವು ಕನಿಷ್ಠ 1000 ರೂಪಾಯಿಗೆ ತೆರೆಯಬಹುದು. ಶೇಕಡಾ 7.5 ರಷ್ಟು ಬಡ್ಡಿ ನಿಮಗೆ ಈ ಯೋಜನೆಯಲ್ಲಿ ಸಿಗುತ್ತದೆ. ಮಧ್ಯದಲ್ಲೇ ನಿಮಗೆ ಖಾತೆಯನ್ನು ಹಿಂಪಡೆಯುವ ಅವಕಾಶವಿದೆ. ನೀವು ಒಂದು ವರ್ಷದ ನಂತ್ರ ಹಣವನ್ನು ವಾಪಸ್ ಪಡೆಯಬಹುದು.
ಈ ಖಾತೆಯನ್ನು ಯಾವುದೇ ಮಹಿಳೆ ತೆರೆಯಬಹುದು. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಖಾತೆಯನ್ನು ಪಾಲಕರು ತೆರೆಯಬೇಕು. ಫಾರ್ಮ್-1 ಅನ್ನು ಭರ್ತಿ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಬಣ್ಣದ ಫೋಟೋ ಸೇರಿದಂತೆ ಕೆಲ ದಾಖಲೆ ನೀಡಬೇಕು. ಅಂಚೆ ಕಚೇರಿ ಮಾತ್ರವಲ್ಲದೆ ಬ್ಯಾಂಕ್ ನಲ್ಲಿ ಕೂಡ ನೀವು ಖಾತೆ ತೆರೆಯಬಹುದು. ಈ ಯೋಜನೆಯಲ್ಲಿ ನೀವು ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದು, ಎರಡು ವರ್ಷದ ನಂತ್ರ ಖಾತೆ ಮುಚ್ಚುವಾಗ ನಿಮಗೆ 1,16022 ರೂಪಾಯಿ ಸಿಗುತ್ತದೆ. 16022 ರೂಪಾಯಿ ಯೋಜನೆ ನೀಡುವ ಒಟ್ಟೂ ಬಡ್ಡಿಯಾಗಿರುತ್ತದೆ.