ಜಾರಿ ನಿರ್ದೇಶನಾಲಯವು ತಮ್ಮ ನಾಯಕನನ್ನು ವಿಚಾರಣೆ ನಡೆಸುವುದನ್ನು ವಿರೋಧಿಸಿ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ.
ಈ ಹೋರಾಟದಲ್ಲಿ ಪಾಲ್ಗೊಂಡಿರುವ ಅಖಿಲ ಭಾರತ ಮಹಿಳಾ ಕಾಂಗ್ರೆಸ್ (ಎಐಎಂಸಿ) ಅಧ್ಯಕ್ಷೆ ನೆಟ್ಟಾ ಡಿಸೋಜ ಅವರು ಪೊಲೀಸ್ ಸಿಬ್ಬಂದಿ ಮೇಲೆ ಉಗುಳಿದ್ದು, ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ʼಪಿಎಂ ಆವಾಸ್ ಯೋಜನೆʼಯಡಿ 1.12 ಕೋಟಿ ಮನೆ ನಿರ್ಮಾಣ, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿದೆ ಟಿಪ್ಸ್
ವಿಡಿಯೋದಲ್ಲಿ ನೆಟ್ಟಾ ಡಿಸೋಜಾ ಬಸ್ಸಿನೊಳಗೆ ನಿಂತು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು. ಬಖಿಕ ಬಸ್ಸಿನ ಬಾಗಿಲು ಮುಚ್ಚುವ ಮುನ್ನ ಆಕೆ ಪೊಲೀಸರ ಮೇಲೆ ಉಗುಳುತ್ತಾರೆ. ಎದುರಿದ್ದ ಪೊಲೀಸರು ಆ ಕ್ಷಣ ಆಕೆಯ ವರ್ತನೆಗೆ ಕಸಿವಿಸಿಗೊಳ್ಳುತ್ತಾರೆ.
ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ಹಾಗೂ ಸರ್ಕಾರದ ಅಗ್ನಿಪಥ ಯೋಜನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಪ್ರತಿಭಟನೆ ತೀವ್ರಗೊಳಿಸಿದೆ. ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಿರಂತರವಾಗಿ ನಡೆದಿದೆ.
ಮಹಿಳಾ ಕಾಂಗ್ರೆಸ್ ನಾಯಕಿಯ ವರ್ತನೆಯನ್ನು ನೆಟ್ಟಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.