alex Certify ‘ವಾಸ್ತವ್’‌ ಚಿತ್ರದ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಮಹೇಶ್ ಮಂಜ್ರೇಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಾಸ್ತವ್’‌ ಚಿತ್ರದ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಮಹೇಶ್ ಮಂಜ್ರೇಕರ್

ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ‘ವಾಸ್ತವ್’‌ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಕೆಲವು ಕುತೂಹಲಕಾರಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಮಹೇಶ್ ಅವರು ಸಂಜಯ್ ದತ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ, ಅವರ ಬಳಿ ಚಿತ್ರಕಥೆ ಸಿದ್ಧವಾಗಿರಲಿಲ್ಲ. ಆದ್ದರಿಂದ, ಭೇಟಿಯಾಗುವ ಮೊದಲು ಅವರು ಒಂದು ರೆಸ್ಟೋರೆಂಟ್‌ಗೆ ಹೋಗಿ ಎರಡು ಪೆಗ್ ಬಕರ್ಡಿ ರಮ್ ಕುಡಿದು, ನಂತರ ವೇಟರ್‌ನ ನೋಟ್‌ಪ್ಯಾಡ್‌ನಲ್ಲಿ ಚಿತ್ರಕಥೆಯ ಒಂದು ಸಾಲಿನ ಪಾಯಿಂಟರ್‌ಗಳನ್ನು ಬರೆದಿದ್ದರಂತೆ.

ಸಂಜಯ್ ದತ್ ಭೇಟಿಯಾದಾಗ, ಮಹೇಶ್ ಅವರನ್ನು ಗುರುತಿಸಿರಲಿಲ್ಲ ಮತ್ತು ಅವರಿಗೆ ಕುಳಿತುಕೊಳ್ಳಲು ಸ್ಥಳವನ್ನೂ ನೀಡಿರಲಿಲ್ಲ. ಸಂಜಯ್ ದತ್, ಮಹೇಶ್ ಅವರನ್ನು ನೋಡಿ, “ಇವನು ಇಲ್ಲಿ ಏನು ಮಾಡುತ್ತಿದ್ದಾನೆ ?” ಎಂದು ಅಚ್ಚರಿ ವ್ಯಕ್ತಪಡಿಸಿದ್ದರಂತೆ. ಆದರೆ, ಮಹೇಶ್ ಅವರು ಹಠ ಬಿಡದೆ ಅಲ್ಲೇ ಇದ್ದರು. ಕೊನೆಗೆ, ಸಂಜಯ್ ದತ್ ಚಿತ್ರಕಥೆಯನ್ನು ಕೇಳಲು ಒಪ್ಪಿಕೊಂಡಿದ್ದು, ಮಹೇಶ್ ಅವರು ಒಂದೂವರೆ ಗಂಟೆಗಳ ಕಾಲ ಚಿತ್ರಕಥೆಯನ್ನು ಹೇಳಿದ್ದರು. ಚಿತ್ರಕಥೆ ಕೇಳಿ ಸಂಜಯ್ ದತ್ ಚಿತ್ರ ನಿರ್ಮಿಸಲು ನಿರ್ಮಾಪಕರನ್ನು ಹುಡುಕಿದರಂತೆ.

‘ವಾಸ್ತವ್’ ಚಿತ್ರದ ನಿರ್ಮಾಣದ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾದವು. ಸಂಜಯ್ ದತ್‌, ಪ್ರತಿ ವಾರ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು. ಆದ್ದರಿಂದ, ಚಿತ್ರೀಕರಣವು ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ನಡೆಯುತ್ತಿತ್ತು. ಚಿತ್ರದ 35% ಚಿತ್ರೀಕರಣ ಮುಗಿದ ನಂತರ, ನಿರ್ಮಾಪಕರು ಹಣಕಾಸಿನ ಸಮಸ್ಯೆಯಿಂದ ಹೊರಬಂದಿದ್ದು, ಚಿತ್ರೀಕರಣ ಸ್ಥಗಿತಗೊಂಡು ಮತ್ತು ಚಿತ್ರವನ್ನು ಕೈಬಿಡಲಾಗಿದೆ ಎಂಬ ವದಂತಿಗಳು ಹರಡಿತು.

ಆದರೆ, ಮಹೇಶ್ ಅವರು ಹಠ ಬಿಡಲಿಲ್ಲ. ಶ್ಯಾಮ್ ಶ್ರಾಫ್ ಎಂಬುವವರು ಚಿತ್ರೀಕರಣದ ತುಣುಕುಗಳನ್ನು ನೋಡಿ, ಮೆಚ್ಚಿ, 50 ಲಕ್ಷ ರೂಪಾಯಿಗಳಿಗೆ ಬಾಂಬೆ ಹಕ್ಕುಗಳನ್ನು ಖರೀದಿಸಿ, 25 ಲಕ್ಷ ರೂಪಾಯಿ ಮುಂಗಡ ನೀಡಿದರು. ನಂತರ, ಚಿತ್ರೀಕರಣ ಪುನಾರಂಭವಾಯಿತು. ಹಣ ಮುಗಿದ ನಂತರ, ಇತರ ಪ್ರದೇಶಗಳ ಹಕ್ಕುಗಳನ್ನು ಮಾರಾಟ ಮಾಡಿ, ಚಿತ್ರ ಪೂರ್ಣಗೊಳಿಸಲಾಯಿತು.

ಚಿತ್ರದಲ್ಲಿ ತೊಡಗಿಸಿಕೊಂಡವರೆಲ್ಲರೂ ಚಿತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಅದು ಹಣದ ಬಗ್ಗೆ ಇರಲಿಲ್ಲ ಎಂದು ಮಹೇಶ್ ಹೇಳಿದ್ದಾರೆ. ಮಹೇಶ್ ಅವರು ಸಂಜಯ್ ದತ್ ಅವರನ್ನು ‘ವಾಸ್ತವ್’ ಚಿತ್ರದ ಮುಂದುವರೆದ ಭಾಗವಾದ ‘ಹತ್ಯಾರ್’ ಮತ್ತು ‘ಕುರುಕ್ಷೇತ್ರ’, ‘ಪಿತಾ’, ‘ರಕ್ತ’ ಚಿತ್ರಗಳಲ್ಲಿ ನಿರ್ದೇಶಿಸಿದ್ದಾರೆ. ಅವರು ‘ಕಾಂಟೆ’, ‘ಪ್ಲಾನ್’, ‘ಮುಸಾಫಿರ್’ ಮತ್ತು ‘ಜಿಂದಾ’ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...