
ಬೆಂಗಳೂರು: ನವೆಂಬರ್ 1 ರಂದು ಪ್ರತಿ ಮನೆಗಳ ಮೇಲೆ ಕನ್ನಡ ಧ್ವಜ ಹಾರಿಸಲು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಕರೆ ನೀಡಿದ್ದಾರೆ.
ರಾಜ್ಯೋತ್ಸವ ದಿನದಂದು ಮನೆಗಳ ಮೇಲೆ ಕನ್ನಡ ಧ್ವಜ ಹಾರಿಸಲು ಅವರು ಕರೆ ನೀಡಿದ್ದಾರೆ. ಕನ್ನಡದ ಕಣ್ವ ಖ್ಯಾತಿಯ ಬಿ.ಎಂ. ಶ್ರೀಕಂಠಯ್ಯನವರು ರಚಿಸಿದ ‘ಏರಿಸಿ ಹಾರಿಸಿ ಕನ್ನಡದ ಬಾವುಟ… ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ…’ ಎನ್ನುವಂತೆ ಈ ಬಾರಿ ಅರ್ಥಪೂರ್ಣವಾಗಿ ಕನ್ನಡ ಪ್ರೇಮ ಮೆರೆಯೋಣ ಎಂದು ಹೇಳಿದ್ದಾರೆ.