
ಕೃಷ್ಣ ವಂಶಿ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್ ಬಾಬು ಅವರಿಗೆ ಜೋಡಿಯಾಗಿ ಸೋನಾಲಿ ಬೇಂದ್ರೆ ಅಭಿನಯಿಸಿದ್ದು, ಲಕ್ಷ್ಮಿ, ಸುಕುಮಾರಿ, ಅನ್ನಪೂರ್ಣ, ಪ್ರಸಾದ್ ಬಾಬು, ಹೇಮಾ, ಗುಂಡು ಸುದರ್ಶನ್, ಧೂಳಿಪಾಲ, ಪ್ರಕಾಶ್ ರಾಜ್, ನಾಗಬಾಬು ಉಳಿದ ಪಾತ್ರ ವರ್ಗದಲ್ಲಿದ್ದಾರೆ. ರಾಮ್ ಪ್ರಸಾದ್ ಆರ್ಟ್ಸ್ ಬ್ಯಾನರ್ ನಲ್ಲಿ ಎನ್ ದೇವಿ ಪ್ರಸಾದ್, ರಾಮಲಿಂಗೇಶ್ವರ ರಾವ್, ಗೋಪಿ ನಂದಿಗಾಮ್ ನಿರ್ಮಾಣ ಮಾಡಿದ್ದಾರೆ. ಮಣಿ ಶರ್ಮ ಸಂಗೀತ ಸಂಯೋಜನೆ ನೀಡಿದ್ದು, ನಿರ್ದೇಶಕ ಕೃಷ್ಣ ವಂಶಿ ಅವರ ಸಂಕಲನವಿದೆ.