
ಜನವರಿ 12ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಶೀಘ್ರದಲ್ಲೇ ಉದಯ ಟಿವಿಯಲ್ಲಿ ‘ಗುಂಟೂರು ಕಾರಂ’ ಪ್ರಸಾರವಾಗುತ್ತಿದ್ದು, ಈ ಕುರಿತು ಉದಯ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದೆ.
ತ್ರಿವಿಕ್ರಂ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್ ಬಾಬು, ಶ್ರೀ ಲೀಲಾ ಸೇರಿದಂತೆ ಮೀನಾಕ್ಷಿ ಚೌಧರಿ, ಪ್ರಕಾಶ್ ರಾಜ್, ರಮ್ಯಾ ಕೃಷ್ಣ, ಜಯರಾಮ್, ಜಗಪತಿ ಬಾಬು, ಸುನಿಲ್, ರಾವ್ ರಮೇಶ್ ತೆರೆ ಹಂಚಿಕೊಂಡಿದ್ದಾರೆ. ಹಾರಿಕಾ ಹಾಗೂ ಅಸೈನ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಎಸ್ ರಾಧಾಕೃಷ್ಣ ನಿರ್ಮಾಣ ಮಾಡಿದ್ದು, ತಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ನವೀನ್ ನೂಲಿ ಸಂಕಲನವಿದೆ.