
ಅಂದಹಾಗೆ ಮಹೇಶ್ ಬಾಬುಗೆ ’ಪ್ರಿನ್ಸ್’ ಎಂದು ಪ್ರೀತಿಯಿಂದ ಅಭಿಮಾನಿಗಳು ಕರೆಯುವುದು, ಅವರು ಮುಟ್ಟಿದ್ದೆಲ್ಲ ಚಿನ್ನ ಆಗುವ ಕಾರಣಕ್ಕಂತೆ.
ಆದರೆ, ಈ ಬಾರಿ ಅವರು ಅಭಿನಯಿಸಿರುವ ಜಾಹೀರಾತು ಮಾತ್ರ, ಮಹೇಶ್ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ.
ಅಂಚೆ ಕಚೇರಿಯ ಈ ʼಪಿಂಚಣಿʼ ಯೋಜನೆ ಕುರಿತು ನಿಮಗೆ ತಿಳಿದಿರಲಿ ಮಾಹಿತಿ
ಪಾನ್ ಬಹಾರ್ ಎಂಬ ಪಾನ್ ಮಸಾಲ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅದರ ಸೇವನೆಗೆ ಹುರುಪು ತುಂಬುವ ಕೆಲಸ ಮಾಡಿರುವ ನಟನ ವಿರುದ್ಧ ಫ್ಯಾನ್ಸ್ ಗರಂ ಆಗಿದ್ದಾರೆ. ಟ್ವಿಟರ್ನಲ್ಲಿ ಸ್ವಲ್ಪ ಮಟ್ಟಿಗೆ ತರಾಟೆಗೂ ತೆಗೆದುಕೊಂಡಿದ್ದಾರೆ.
#MaheshWithPanBaharElaichi ಟ್ರೆಂಡಿಂಗ್ನಲ್ಲಿದ್ದ ಈ ಹ್ಯಾಷ್ಟ್ಯಾಗ್ ಪ್ರಶ್ನಿಸಿರುವ ಅನೇಕರು, ’ಇದು ಏಲಕ್ಕಿಯೂ ಅಲ್ಲ, ಜೀರಿಗೆಯೂ ಅಲ್ಲ. ಕೇವಲ ಗುಟ್ಕಾ ಮಾತ್ರ. ಅಂದಹಾಗೆ ಇದರ ಸೇವನೆ ಮಾಡಿರಿ ಎನ್ನುತ್ತಿರುವ ನೀವು, ಪರೋಕ್ಷವಾಗಿ ಕ್ಯಾನ್ಸರ್ ಕಾಯಿಲೆ ಉಚಿತವಾಗಿ ಪಡೆಯಿರಿ ಎನ್ನುತ್ತಿದ್ದೀರಿ. ಇದರ ಅರಿವು ನಿಮಗಿದೆಯೇ?’ ಎಂದು ಕೇಳಿದ್ದಾರೆ.
ಯಾವ ಬ್ರ್ಯಾಂಡ್ ಪರವಾಗಿ ಪ್ರಚಾರ ಮಾಡಬೇಕು ಅಥವಾ ಮಾಡಬಾರದು ಎಂಬ ಸಾಮಾನ್ಯ ಜ್ಞಾನ ಸ್ಟಾರ್ ನಟರಿಗೆ ಇರಬೇಕು. ಅವರ ಸ್ಟಾರ್ ಪಟ್ಟ ಕಾಯ್ದುಕೊಳ್ಳುವುದು ಒಂದು ಜವಾಬ್ದಾರಿ. ಕೋಟಿಗಟ್ಟಲೆ ಸಿಗುತ್ತದೆ ಎಂದ ಮಾತ್ರಕ್ಕೆ ಜನರಿಗೆ ಸಾಯಲು ಪ್ರಚೋದಿಸಬಾರದು ಎಂದು ಟ್ವೀಟಿಗರು ಮಹೇಶ್ ಸೇರಿದಂತೆ ಅನೇಕ ನಟರಿಗೆ ಕಿವಿಮಾತು ಹೇಳಿದ್ದಾರೆ ಕೂಡ.
8ನೇ ಬಾರಿ ತಾಯಿಯಾಗ್ತಿರುವ ಮಹಿಳೆಗೆ ಪದೇ ಪದೇ ಕೇಳಲಾಗ್ತಿದೆ ಈ ಪ್ರಶ್ನೆ
ಅಂದಹಾಗೆ, ʼಸರಕಾರು ವಾರಿ ಪಾಟʼ ಸಿನಿಮಾ ಶೂಟಿಂಗ್ನಲ್ಲಿ ಮಹೇಶ್ ಬಾಬು ಸದ್ಯ ಬ್ಯುಸಿಯಾಗಿದ್ದಾರೆ. 2022ರ ಜನವರಿಯಲ್ಲಿ ಈ ಸಿನಿಮಾ ತೆರೆಕಾಣುವ ನಿರೀಕ್ಷೆ ಇದೆ. ನಟಿ ಕೀರ್ತಿ ಸುರೇಶ್ ಅವರು ಸಿನಿಮಾದಲ್ಲಿ ಹಿರೊಯಿನ್ ಆಗಿದ್ದಾರೆ.