alex Certify ‘ಗಾಂಧಿ’ ಸಿನಿಮಾ ಬಳಿಕವೇ ಮಹಾತ್ಮ ಗಾಂಧಿ ಗೊತ್ತಾಗಿದ್ದು; ಪ್ರಧಾನಿ ಮೋದಿ ಹೇಳಿಕೆಗೆ ಕಿಮ್ಮನೆ ರತ್ನಾಕರ್ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗಾಂಧಿ’ ಸಿನಿಮಾ ಬಳಿಕವೇ ಮಹಾತ್ಮ ಗಾಂಧಿ ಗೊತ್ತಾಗಿದ್ದು; ಪ್ರಧಾನಿ ಮೋದಿ ಹೇಳಿಕೆಗೆ ಕಿಮ್ಮನೆ ರತ್ನಾಕರ್ ಕಿಡಿ

Kimmane Ratnakar : ಶಿವಮೊಗ್ಗ: ಗಾಂಧಿ ಜಯಂತಿಯಂದು ಕಿಮ್ಮನೆ ರತ್ನಾಕರ್ ಉಪವಾಸ ಸತ್ಯಾಗ್ರಹ - Kannada Oneindia

ಮಹಾತ್ಮ ಗಾಂಧೀಜಿಯವರನ್ನು ಸಿನಿಮಾ ನೋಡಿದ ಮೇಲೆ ಗೊತ್ತಾಯಿತು ಎಂದು ಹೇಳಿರುವ ಪ್ರಧಾನಿ ಮೋದಿಯವರ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹರಿಹಾಯ್ದು ಇಂತಹ ಪ್ರಧಾನಿ ನಮ್ಮ ದೇಶಕ್ಕೆ ಬೇಕಾ ಎಂದು ಪ್ರಶ್ನೆ ಮಾಡಿದರು.

ಅವರು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಇಡೀ ವಿಶ್ವಕ್ಕೆ ಗೊತ್ತಿದೆ. ಮಾರ್ಟಿನ್ ಲೂಥರ್, ನೆಲ್ಸನ್ ಮಂಡೆಲ, ಚರ್ಚಿಲ್, ಐನ್‌ಸ್ಟಿನ್, ಲಾರ್ಡ್ ಮೌಂಟ್ ಬ್ಯಾಟನ್ ಸೇರಿದಂತೆ ವಿಶ್ವದ ಅನೇಕ ಮಹಾನೀಯರು ಗಾಂಧೀಜಿಯವರನ್ನು ಹಾಡಿಹೊಗಳಿದ್ದಾರೆ. ಗಾಂಧೀಜಿಯವರ ತತ್ವಗಳೇ ನಮಗೆ ಮಾರ್ಗದರ್ಶನ ಎಂದು ಹೇಳಿದ್ದಾರೆ. ಸುಮಾರು 250 ದೇಶಗಳಲ್ಲಿ ಗಾಂಧೀಜಿಯವರ ಅಧ್ಯಯನ ಕೇಂದ್ರವಿದೆ. ಸುಮಾರು 35 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಗಾಂಧೀಜಿ ಕುರಿತು ಬಂದಿದೆ. 145ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಧೀಜಿಯವರ ಪ್ರತಿಮೆಗಳಿವೆ. ಭವಿಷ್ಯ ಇವೆಲ್ಲವೂ ಮೋದಿಯವರಿಗೆ ಗೊತ್ತಿರಲಿಕ್ಕಿಲ್ಲ ಎಂದರು.

ಮೋದಿ ಅಕ್ಷರಶಃ ಈಗ ಹತಾಶರಾಗಿದ್ದಾರೆ. ಸುಳ್ಳು ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ತೆಗೆದುಬಿಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸ್ವಾತಂತ್ರದ ನಂತರ ಇಷ್ಟು ವರ್ಷಗಳಲ್ಲಿ ಆರ್‌ಎಸ್‌ಎಸ್ ಆಗಲಿ, ಬಿಜೆಪಿಯಾಗಲಿ ಮೀಸಲಾತಿ ಪರವಾಗಿ ಎಂದೂ ಇಲ್ಲ ಎಂದು ಟೀಕಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...