ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸೋಮವಾರ ಮಹಾತ್ಮ ಗಾಂಧಿ ಅವರನ್ನು ಕಳೆದ ಶತಮಾನದ ಮಹಾಪುರುಷ ಎಂದು ಬಣ್ಣಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಶತಮಾನದ ಯುಗಪುರುಷ ಎಂದು ಕರೆದಿದ್ದಾರೆ.
ಮಹಾತ್ಮ ಗಾಂಧಿಯವರು ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ಬ್ರಿಟಿಷರ ಗುಲಾಮಗಿರಿಯಿಂದ ನಮ್ಮನ್ನು ಮುಕ್ತಗೊಳಿಸಿದರು. ಭಾರತದ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ಅವರು ನಾವು ಯಾವಾಗಲೂ ಇರಬೇಕೆಂದು ಬಯಸಿದ ಹಾದಿಗೆ ನಮ್ಮನ್ನು ಕರೆದೊಯ್ದಿದ್ದಾರೆ ಎಂದು ಧನ್ಕರ್ ಹೇಳಿದರು.
ಜೈನ ಅನುಭಾವಿ ಮತ್ತು ತತ್ವಜ್ಞಾನಿ ಶ್ರೀಮದ್ ರಾಜ್ ಚಂದ್ರಜಿ ಅವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು. “ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಕಳೆದ ಶತಮಾನದ ಮಹಾಪುರುಷ ಮಹಾತ್ಮ ಗಾಂಧಿ. ನರೇಂದ್ರ ಮೋದಿ ಈ ಶತಮಾನದ ಯುಗಪುರುಷ” ಎಂದು ಧನ್ಕರ್ ಹೇಳಿದರು.