ಶಿವ..ಶಿವ ಎಂದ್ರೆ ಭಯವಿಲ್ಲ. ಶಿವನಾಮಕೆ ಸಾಟಿ ಬೇರಿಲ್ಲ ಎಂದು ಹಿರಿಯರು ಹೇಳಿದ್ದಾರೆ. ಯಾವ ಸಮಯದಲ್ಲಿಯಾದ್ರೂ ಶಿವನ ಧ್ಯಾನ ಮಾಡಬಹುದು. ಶಿವ ಶಿವ ಎಂದ್ರೆ ಸಾಕು ಶಿವ ತೃಪ್ತನಾಗಿಬಿಡ್ತಾನೆ. ಅದ್ರಲ್ಲೂ ಶಿವರಾತ್ರಿಯಂದು ಶಿವನಿಗೆ ಅಭಿಷೇಕ ಮಾಡಿದ್ರೆ ಭಕ್ತರು ಕೇಳಿದ್ದೆಲ್ಲ ಕೊಡ್ತಾನೆ ಆ ಶಂಕರ.
ಮಹಾಶಿವರಾತ್ರಿಯಂದು ಅಭಿಷೇಕಕ್ಕೆ ವಿಶೇಷ ಮಹತ್ವವಿದೆ. ಬೇರೆ ಬೇರೆ ಲೋಹದ ಶಿವಲಿಂಗಗಳಿಗೆ ಅಭಿಷೇಕ ಮಾಡುವುದರಿಂದ ಬೇರೆ ಬೇರೆ ಫಲ ಸಿಗುತ್ತದೆ.
ಚಿನ್ನದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಸತ್ಯಲೋಕ ಪ್ರಾಪ್ತಿಯಾಗುತ್ತದೆ.
ಬೆಳ್ಳಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ರೋಗ ನಾಶವಾಗುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ.
ಮುತ್ತಿನ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ.
ನೀಲಮಣಿ ಶಿವಲಿಂಗಕ್ಕೆ ಪೂಜೆ ಮಾಡುವುದರಿಂದ ಗೌರವ ಪ್ರಾಪ್ತಿಯಾಗುತ್ತದೆ.
ಸ್ಪಟಿಕದ ಶಿವಲಿಂಗ ಪೂಜೆ ಮಾಡುವುದರಿಂದ ಬಯಕೆಗಳು ಈಡೇರುತ್ತವೆ.
ತಾಮ್ರದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ದುರ್ಘಟನೆ ದೂರವಾಗುತ್ತದೆ.
ಶತ್ರುಗಳ ಶಮನಕ್ಕೆ ಕಬ್ಬಿಣದ ಶಿವಲಿಂಗಕ್ಕೆ ಪೂಜೆ ಮಾಡಬೇಕು.
ದೇಸಿ ಹಸುವಿನ ಹಾಲಿನಿಂದ ಬಂದ ಬೆಣ್ಣೆಯಿಂದ ಸಿದ್ಧವಾದ ಶಿವಲಿಂಗಕ್ಕೆ ಪೂಜೆ ಮಾಡುವುದರಿಂದ ಲೌಕಿಕ ಸುಖ ಪ್ರಾಪ್ತಿಯಾಗುತ್ತದೆ.