
ಹುಬ್ಬಳ್ಳಿ: ಮಹಾಶಿವರಾತ್ರಿಗೆ ದಿನಗಣನೆ ಆರಂಭವಾಗಿದೆ. ಭಕ್ತರು ಹಾಗೂ ಪ್ರಯಣಿಕರಿಗಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗೋಕರ್ಣ, ಮುರುಡೇಶ್ವರಕ್ಕೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ.
ಈ ಬಗ್ಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಂದ ಶಿವ ಭಕ್ತರಿಗೆ, ಪ್ರಯಾಣಿಕರಿಗಾಗಿ ಮಹಾಶಿವರಾತ್ರಿಗೆ ದೇವಾಲಯಗಳಿಗೆ ತೆರಳಲು ಗೋಕರ್ನ ಹಾಗೂ ಮುರುಡೇಶ್ವರಕ್ಕೆ ವಿಶೇಷ ಬಸ್ ಕಲ್ಪಿಸಲಾಗಿದೆ.
ಸಾರ್ವಜನಿಕರ ಮನವಿ ಮೇರೆಗೆ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ವಿಶೇಷ ಬಸ್ ವ್ಯವಸ್ಥೆ ಇರಲಿದೆ. ಫೆ.25ರಂದು ಮಂಗಳವಾರ ರಾತ್ರಿ ಹಾಗೂ ಫೆ.26ರಂದು ಬುಧವಾರ ಬೆಳಿಗ್ಗೆ ಹುಬ್ಬಳ್ಳಿಯಿಂದ ಗೋಮಕರರ್ಣ ಹಾಗೂ ಮುರುಡೆಷ್ವರಕ್ಕೆ ನೇರ ಬಸ್ ವ್ಯವಸ್ಥೆ ಇರಲಿದೆ. ಈ ಬಸ್ ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡಲಿದೆ ಎಂದು ತಿಳಿಸಿದ್ದಾರೆ.