ಮುಂಬೈ: ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದು ನವಜಾತ ಶಿಶು ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಭಿವಂಡಿ ಪ್ರದೇಶದಲ್ಲಿ ನಡೆದಿದೆ.
ಭಿವಂಡಿ ಪ್ರದೇಶದ ಧೋಬಿ ತಲಾಬ್ ಪ್ರದೇಶದ ದುರ್ಗಾ ರಸ್ತೆಯಲ್ಲಿರುವ ಕಟ್ಟಡ ಮಧ್ಯರಾತ್ರಿ ಏಕಾಏಕಿ ಕುಸಿದು ಬಿದ್ದಿದ್ದು, ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಐವರು ಗಾಯಗೊಂಡಿದ್ದಾರೆ.
40 ವರ್ಷದ ಉಜ್ಮಾ ಅತೀಫ್ ಹಾಗೂ 8 ತಿಂಗಳ ಮಗು ತಸ್ಲಿಮಾ ಮೊಸರ್ ಮೃತರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡ ತೆರವು ಕಾರಾಚರಣೆ ಪೂರ್ಣಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.