ಮಹಾರಾಷ್ಟ್ರದ ನಾಸಿಕ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ತನ್ನ 10 ವರ್ಷದ ಅಂಗವಿಕಲ ಮಲ ಮಗನ ಖಾಸಗಿ ಅಂಗವನ್ನು ಸುಟ್ಟಿದ್ದಾಳೆ. ಪೀಡಿತ, ತಮ್ಮನನ್ನು ಬೆಡ್ ನಿಂದ ಕೆಳಗೆ ಬೀಳಿಸಿದ್ದಾನೆ ಎಂಬ ಕಾರಣಕ್ಕೆ ತಾಯಿ ಈ ಕೃತ್ಯವೆಸಗಿದ್ದಾಳೆ. ದಿಂಡೋರಿ ತಾಲೂಕಿನ ಹಳ್ಳಿಯಲ್ಲಿ ಘಟನೆ ನಡೆದಿದೆ. ಪತಿ ದೂರಿನ ಮೇಲೆ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ಒಂದು ವರ್ಷದ ತಮ್ಮನ ಜೊತೆ ಪೀಡಿತ ಬೆಡ್ ಮೇಲೆ ಕುಳಿತಿದ್ದನಂತೆ. ಆಟವಾಡುವ ವೇಳೆ ಬೆಡ್ ನಿಂದ ತಮ್ಮನನ್ನು ಪೀಡಿತ ಬೀಳಿಸಿದ್ದಾನೆ. ಇದ್ರಿಂದ ಕೋಪಗೊಂಡ ತಾಯಿ ಮೊದಲು ಮನಸ್ಸಿಗೆ ಬಂದಂತೆ ಥಳಿಸಿದ್ದಾಳೆ. ನಂತ್ರ ಖಾಸಗಿ ಅಂಗ ಸುಟ್ಟಿದ್ದಾಳೆ.
ಪೀಡಿತನ ತಂದೆ ಮನೆಗೆ ಬಂದಾಗ ವಿಷ್ಯ ಗೊತ್ತಾಗಿದೆ. ನಂತ್ರ ಪೀಡಿತನನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ದೂರು ನೀಡಿದ್ದಾನೆ. ಪೀಡಿತ ಬಾಲಕನ ಖಾಸಗಿ ಅಂಗ ಶೇಕಡಾ 20ರಷ್ಟು ಸುಟ್ಟಿದೆ. ಮಗುವಿನ ಸ್ಥಿತಿ ಗಂಭೀರವಾಗಿದೆ.