alex Certify Shocking News: 15 ನಿಮಿಷದಲ್ಲಿ ಮಹಿಳೆಯೊಬ್ಬಳಿಗೆ 3 ಡೋಸ್ ಲಸಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: 15 ನಿಮಿಷದಲ್ಲಿ ಮಹಿಳೆಯೊಬ್ಬಳಿಗೆ 3 ಡೋಸ್ ಲಸಿಕೆ…!

ದೇಶ ವಿದೇಶದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಲಸಿಕೆಯನ್ನು ಅಸ್ತ್ರವಾಗಿ ಬಳಸಲಾಗ್ತಿದೆ. ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ವೇಗ ಪಡೆದಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಲಸಿಕೆ ನೀಡಿದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಮಧ್ಯೆ ಲಸಿಕಾ ಕೇಂದ್ರದಲ್ಲಿ ನಡೆದ ಕೆಲವೊಂದು ಯಡವಟ್ಟುಗಳು ಆಗಾಗ ವರದಿಯಾಗ್ತಿರುತ್ತವೆ. ಮಹಾರಾಷ್ಟ್ರದ ಥಾಣೆಯಲ್ಲಿ ಮಹಿಳೆಯೊಬ್ಬಳಿಗೆ 15 ನಿಮಿಷದಲ್ಲಿ 3 ಡೋಸ್ ಕೊರೊನಾ ಲಸಿಕೆ ಹಾಕಲಾಗಿದೆಯಂತೆ.

ಕೊರೊನಾ ಲಸಿಕಾ ಕೇಂದ್ರದಿಂದ ಹೊರ ಬಂದ ಮಹಿಳೆ, ಮೂರು ಡೋಸ್ ಲಸಿಕೆ ಹಾಕಿದ್ದಾರೆಂದು ಪತಿಗೆ ಹೇಳಿದ್ದಾಳೆ. ಆದ್ರೆ ಲಸಿಕಾ ಕೇಂದ್ರದ ಸಿಬ್ಬಂದಿ ಅದನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಸ್ಥಳೀಯ ಆಡಳಿತ ಭರವಸೆ ನೀಡಿದೆ.

ಥಾಣೆಯಲ್ಲಿ ಸೋಮವಾರ ಹೊಸ 480 ಕೋವಿಡ್ -19 ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು 5,31,200 ಕ್ಕೆ ಏರಿದೆ. ಕೊರೊನಾದ ಡೆಲ್ಟಾ ಪ್ಲಸ್ ರೂಪಾಂತರದ 21 ಪ್ರಕರಣಗಳು ಸಹ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳದ 20 ಮಂದಿಯಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...