alex Certify ಈ ಶಿಕ್ಷಕನಿಗೆ ಹೇಳಿ ಹ್ಯಾಟ್ಸಾಪ್: 50 ಕ್ಕೂ ಅಧಿಕ ಆಪ್ ರಚಿಸಿದ ಸಾಧಕನಿಗೆ ಒಲಿದು ಬಂದ ರಾಷ್ಟ್ರಪ್ರಶಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಶಿಕ್ಷಕನಿಗೆ ಹೇಳಿ ಹ್ಯಾಟ್ಸಾಪ್: 50 ಕ್ಕೂ ಅಧಿಕ ಆಪ್ ರಚಿಸಿದ ಸಾಧಕನಿಗೆ ಒಲಿದು ಬಂದ ರಾಷ್ಟ್ರಪ್ರಶಸ್ತಿ

50 ಕ್ಕೂ ಹೆಚ್ಚು ಕಲಿಕಾ ಅಪ್ಲಿಕೇಶನ್‌ ಗಳನ್ನು ಅಭಿವೃದ್ಧಿಪಡಿಸಿದ ಮಹಾರಾಷ್ಟ್ರ ಶಿಕ್ಷಕನಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಬಂದಿದೆ.

ಮಹಾರಾಷ್ಟ್ರದ ಮರಾಠವಾಡದ ಉಸ್ಮಾನಾಬಾದ್ ಜಿಲ್ಲೆಯ 34 ವರ್ಷದ ಶಿಕ್ಷಕ ಉಮೇಶ್ ಖೋಸ್ ಅವರು ತಮ್ಮ ತಾಂತ್ರಿಕ ಜ್ಞಾನದ ಕೊರತೆಯನ್ನು ನೀಗಿಸಿಕೊಂಡು ಮಕ್ಕಳಿಗಾಗಿ 51 ಕಲಿಕಾ ಆಪ್‌ಗಳನ್ನು ರಚಿಸಿದ್ದು, 2021 ರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ 44 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪ್ರದಾನ ಮಾಡಿದರು.

ಮಹಾರಾಷ್ಟ್ರ ಶಿಕ್ಷಣ ಸಚಿವೆ ವರ್ಷಾ ಗಾಯಕವಾಡ್ ಈ ಹಿಂದೆ ಉಮೇಶ್ ಖೋಸ್ ಅವರ ಸಾಧನೆಯ ಬಗ್ಗೆ ಟ್ವೀಟ್ ಮಾಡಿದ್ದರು. ಔಪಚಾರಿಕ ತಾಂತ್ರಿಕ ಶಿಕ್ಷಣವಿಲ್ಲದೆ 50 ಕ್ಕೂ ಹೆಚ್ಚು ಆಪ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ ಉಮೇಶ್ ಖೋಸ್,

ಕಲೆ ಮತ್ತು ಶಿಕ್ಷಕರ ಶಿಕ್ಷಣದಲ್ಲಿ ಔಪಚಾರಿಕ ಪದವಿಗಳನ್ನು ಹೊಂದಿದ್ದರೂ ತಂತ್ರಜ್ಞಾನದ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಆದಾಗ್ಯೂ ಯೂಟ್ಯೂಬ್ ಮತ್ತು ಗೂಗಲ್ ಮೂಲಕ ಮೊಬೈಲ್ ಆಪ್‌ ಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂದು ಸ್ವತಃ ಕಲಿತುಕೊಂಡಿದ್ದಾರೆ.

ಅವರು 51 ಕಲಿಕಾ ಅಪ್ಲಿಕೇಶನ್‌ಗಳು, ಗೇಮ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವರ ತಂತ್ರಜ್ಞಾನದ ವ್ಯಾಪಕ ಬಳಕೆಯು ಎರಡು ಜಿಲ್ಲಾ ಪರಿಷತ್ ಶಾಲೆಗಳ ಪರಿವರ್ತನೆಗೆ ಕಾರಣವಾಗಿದೆ.

ಮರಾಠಿ, ಇಂಗ್ಲಿಷ್ ಮತ್ತು ಗಣಿತ ವಿಷಯಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆಧರಿಸಿದ ಆಫ್‌ಲೈನ್ ಮೊಬೈಲ್ ಅಪ್ಲಿಕೇಶನ್‌ಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, 50,000 ಕ್ಕೂ ಹೆಚ್ಚು ಡೌನ್‌ಲೋಡ್‌ ಆಗಿದೆ.

ಬಂಜಾರ ಭಾಷೆಯಲ್ಲಿ ವಿಶೇಷ ಕಲಿಕಾ ವಿಷಯ

ಖೋಸ್ ಅವರು ಕಡ್ಡೋರಾದ ಜಗದಂಬನಗರ ಜಿಪಂ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ, ಅವರ ಅನೇಕ ವಿದ್ಯಾರ್ಥಿಗಳು ಬಂಜಾರ ಸಮುದಾಯದವರಾಗಿರುವುದರಿಂದ ಈ ಮಕ್ಕಳ ಮಾತೃಭಾಷೆಯಲ್ಲಿ ಕಲಿಕಾ ಸಾಮಗ್ರಿಗಳನ್ನು ರಚಿಸಿದ್ದಾರೆ. ಅವರು ಬಂಜಾರದಲ್ಲಿ ಅಭಿವೃದ್ಧಿಪಡಿಸಿದ ಕೆಲವು ವಿಷಯದ ಆಪ್ ಗಳು ಸರ್ಕಾರದ NCERT- ಅಭಿವೃದ್ಧಿಪಡಿಸಿದ ದೀಕ್ಷಾ ಆಪ್‌ನಲ್ಲಿ ಸಹ ಕಾಣಿಸಿಕೊಂಡಿವೆ.

ಇತರ ಸಾಧನೆಗಳು

ಇದು ಮಾತ್ರವಲ್ಲ, ಉಮೇಶ್ ಐದು ಪುಸ್ತಕಗಳು ಮತ್ತು 47 ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಅವರ ಶಾಲೆಯ ವೆಬ್‌ಸೈಟ್ ಅನ್ನು ಸಹ ಅಭಿವೃದ್ಧಿಪಡಿಸಿದ್ದಾರೆ. ಶಿಕ್ಷಣದಲ್ಲಿ ಅವರ ಕೆಲಸದಿಂದಾಗಿ ಮಹಾರಾಷ್ಟ್ರ ಸರ್ಕಾರವು ಅವರನ್ನು ರಾಷ್ಟ್ರೀಯ ಐಸಿಟಿ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಅವರು ಈ ವರ್ಷ ಜುಲೈನಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಿಕ್ಷಣದ ಸುಧಾರಣೆಗೆ ಅವರು ನೀಡಿದ ಕೊಡುಗೆಗಾಗಿ ರಾಷ್ಟ್ರಪ್ರಶಸ್ತಿ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...