ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾಗುತ್ತಿದ್ದಂತೆ ವಿವಿಧ ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ. ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ಬಹುಮತಕ್ಕೆ 145 ಸ್ಥಾನಗಳಲ್ಲಿ ಜಯಗಳಿಸಬೇಕಿದೆ.
ಮ್ಯಾಟ್ರಿಜ್ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 150 ರಿಂದ 170, ಕಾಂಗ್ರೆಸ್ ಮೈತ್ರಿಕೂಟ 110 ರಿಂದ 130, ಇತರರು 8 ರಿಂದ 10 ಸ್ಥಾನ ಗಳಿಸುವ ಸಾಧ್ಯತೆ ಇದೆ.
ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 152 ರಿಂದ 160, ಕಾಂಗ್ರೆಸ್ ಮೈತ್ರಿಕೂಟ 130 ರಿಂದ 138, ಇತರರು 6-8 ಸ್ಥಾನ ಗಳಿಸುವ ಸಾಧ್ಯತೆ ಇದೆ.
ಪೀಪಲ್ ಪಲ್ಸ್ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 175 ರಿಂದ 195, ಕಾಂಗ್ರೆಸ್ ಮೈತ್ರಿಕೂಟ 85 ರಿಂದ 112, ಇತರರು 7- 12 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.
ಪೋಲ್ ಡೈರಿ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 122 ರಿಂದ 186, ಕಾಂಗ್ರೆಸ್ ಮೈತ್ರಿಕೂಟ 69 ರಿಂದ 121, ಇತರರು 12 ರಿಂದ 29 ಸ್ಥಾನ ಗಳಿಸುವ ಸಂಭವ ಇದೆ.
ಲೋಕಶಕ್ತಿ ಮರಾಠಿ ರುದ್ರ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 128 ರಿಂದ 142, ಕಾಂಗ್ರೆಸ್ ಮೈತ್ರಿಕೂಟ 125 ರಿಂದ 140, ಇತರರು 18ರಿಂದ 23 ಸ್ಥಾನ ಗಳಿಸುವ ಸಂಭವ ಇದೆ.
ಎಲೆಕ್ಟ್ರೋಲ್ ಎಡ್ಜ್ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 117 ರಿಂದ 118, ಕಾಂಗ್ರೆಸ್ ಮೈತ್ರಿಕೂಟ 149 ರಿಂದ 150, ಇತರರು 18ರಿಂದ 19ರಿಂದ 20 ಸ್ಥಾನ ಗಳಿಸುವ ಸಾಧ್ಯತೆ ಇದೆ.
ಎಸ್ಎಎಸ್ ಹೈದರಾಬಾದ್ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 125 ರಿಂದ140, ಕಾಂಗ್ರೆಸ್ ಮೈತ್ರಿಕೂಟ 135 ರಿಂದ 150, ಇತರರು 20ರಿಂದ 25 ಸ್ಥಾನ ಜಯಗಳಿಸುವ ಸಾಧ್ಯತೆ ಇದೆ.
ಟೈಮ್ಸ್ ನೌ ಜೆವಿಸಿ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 158 ರಿಂದ 159, ಕಾಂಗ್ರೆಸ್ ಮೈತ್ರಿಕೂಟ 115 ರಿಂದ 116, ಇತರರು 12 ರಿಂದ 13 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.