
ಮಕ್ಕಳು ಆಟವಾಡುವಾಗ ಸಿಕ್ಕ ಸೂಟ್ ಕೇಸ್ ವೊಂದರಲ್ಲಿ ಮಹಿಳೆಯ ರುಂಡ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ವಿರಾರ್ ಪ್ರದೇಶದಲ್ಲಿ ನಡೆದಿದೆ.
ವಿರಾರ್ ಪ್ರದೇಶದ ಪಿರ್ಕುಂದ ದರ್ಗಾ ಬಳಿ ಮಕ್ಕಳು ಆಟವಾಡುತ್ತಿದ್ದಾಗ ಸೂಟ್ ಕೇಸ್ ವೊಂದು ಪತ್ತೆಯಾಗಿದ್ದು, ಈ ವೇಳೆ ಮಕ್ಕಳು ಸೂಟ್ ಕೇಸ್ ತೆರೆದು ನೋಡಿದ್ದಾರೆ. ಅದರಲ್ಲಿ ಮಹಿಳೆಯ ಕತ್ತರಿಸಿದ ತಲೆ ಪತ್ತೆಯಾಗಿದೆ. ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧವೈಸಿದ ಪಾಲ್ಘರ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಗುರುತು ಪತ್ತೆಯಾಗಿಲ್ಲ. ತನಿಖೆ ಮುಂದುವರೆಸಲಾಗಿದೆ.