ಟ್ಯೂಶನ್ ಶಿಕ್ಷಕ ಕೊಟ್ಟ ಪೆಟ್ಟಿನಿಂದಾಗಿ 12 ವರ್ಷದ ಬಾಲಕನೊಬ್ಬನ ಶ್ರವಣ ಸಾಮರ್ಥ್ಯ ಹಾಳಾಗಿರುವ ಘಟನೆ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಭಾರತೀಯ ದಂಡ ಸಂಹಿತೆಯ 323ನೇ ವಿಧಿ (ಉದ್ದೇಶಪೂರಿತವಾಗಿ ಗಾಯಗೊಳಿಸುವುದು), ಹಾಗೂ ಬಾಲ ನ್ಯಾಯ ಕಾಯಿದೆ ಅಡಿ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮನೆಗೆಲಸ ಮಾಡಿಲ್ಲವೆಂದು ಆಪಾದಿತ ಶಿಕ್ಷಕರು ಬಾಲಕನಿಗೆ ಜೋರಾಗಿ ಹೊಡೆದ ಕಾರಣ ಆತನಿಗೆ ಹೀಗೆ ಆಗಿದೆ.
ಮನೆಗೆ ಅಳುತ್ತಾ ಬಂದ ಬಾಲಕ ಟ್ಯೂಶನ್‌ನಲ್ಲಿ ನಡೆದ ಘಟನೆಯನ್ನು ಹೆತ್ತವರಿಗೆ ತಿಳಿಸಿದ್ದಾನೆ. ಒಳ ಕಿವಿಯಲ್ಲಿ ಊತ ಉಂಟಾದ ಕಾರಣ ಬಾಲಕನಿಗೆ ಸರಿಯಾಗಿ ಕೇಳಿಸಿಕೊಳ್ಳಲು ಆಗುತ್ತಿರಲಿಲ್ಲ. ಪ್ರಕರಣ ಸಂಬಂಧ ಯಾವುದೇ ಬಂಧನ ಮಾಡಿಲ್ಲ.
ಇದೇ ರೀತಿ, ಪಾಠಗಳನ್ನು ನೆನಪಿಟ್ಟುಕೊಳ್ಳಲಿಲ್ಲ ಎಂದು 14 ವರ್ಷ ವಯಸ್ಸಿನ ಬಾಲಕನಿಗೆ ಹೊಡೆದ ಕಾರಣ ಮದ್ರಸಾವೊಂದರ ಶಿಕ್ಷಕನ ವಿರುದ್ಧವೂ ದೂರು ದಾಖಲಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು.