alex Certify ತನ್ನ 17 ವರ್ಷದ ಮಗಳನ್ನೇ ಅತ್ಯಾಚಾರಗೈಯ್ಯಲು ಸಹಾಯ ಮಾಡಿದ ಪಾಪಿ ತಾಯಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ 17 ವರ್ಷದ ಮಗಳನ್ನೇ ಅತ್ಯಾಚಾರಗೈಯ್ಯಲು ಸಹಾಯ ಮಾಡಿದ ಪಾಪಿ ತಾಯಿ….!

ಶಾಕಿಂಗ್ ಘಟನೆಯೊಂದರಲ್ಲಿ, 40 ವರ್ಷದ ಮಹಿಳೆಯೊಬ್ಬಳು, 52 ವರ್ಷ ವಯಸ್ಸಿನ ತನ್ನ ಪ್ರಿಯಕರನಿಗೆ, ತನ್ನ 17 ವರ್ಷದ ಮಗಳನ್ನು ಅತ್ಯಾಚಾರಗೈಯ್ಯಲು ಸಹಾಯ ಮಾಡಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜರುಗಿದೆ.

ಅಪ್ರಾಪ್ತ ವಯಸ್ಸಿನ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಇಬ್ಬರೂ ಆಪಾದಿತರನ್ನು ಬಂಧಿಸಲಾಗಿದೆ.

ಕೆಲ ವರ್ಷಗಳಿಂದಲೂ ತನ್ನ ತಾಯಿ ಹಾಗೂ ತಂದೆ ತಮ್ಮ ನಡುವಿನ ಭಿನ್ನಭಿಪ್ರಾಯಗಳ ಕಾರಣ ಪ್ರತ್ಯೇಕವಾಗಿ ವಾಸಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ ಬಾಲಕಿ, ಆಗಿನಿಂದಲೂ ತಾನು ಹಾಗೂ ತನ್ನ ಕಿರಿಯ ಸಹೋದರಿ ತಮ್ಮ ತಾಯಿ ಹಾಗೂ ಆಪಾದಿತ ಗಂಡಸಿನೊಂದಿಗೆ ಇದ್ದಿದ್ದಾಗಿ ತಿಳಿಸಿದ್ದಾರೆ. ಆಗಸ್ಟ್‌ 2020ರಲ್ಲಿ ಆಪಾದಿತ ಗಂಡಸು ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಸಂತ್ರಸ್ತೆಯ ಕಿರಿಯ ಸಹೋದರನನ್ನು ಆಕೆಯ ತಾಯಿ ಸಂಬಂಧಿಕರ ಮನೆಗೆ ಕಳುಹಿಸಿದ್ದಾಳೆ.

ʼಸಂವಿಧಾನʼದ ಆಶಯಗಳನ್ನು ಬಿಂಬಿಸಿದೆ ಈ ವೆಡ್ಡಿಂಗ್‌ ಕಾರ್ಡ್

ಇದಾದ ಕೂಡಲೇ ಸಂತ್ರಸ್ತೆಯ ಮೇಲೆ ಲೈಂಗಿಕವಾಗಿ ಮುಂದುವರೆದ ಆಪಾದಿತನಿಗೆ ಸಹಕರಿಸಲು ಆಕೆಯ ತಾಯಿಯೇ ಆಗ್ರಹಿಸಿದ್ದಾಳೆ. ಇದಾದ ಬಳಿಕ ಆರೋಪಿಯು ಸಂತ್ರಸ್ತೆಯ ಮೇಲೆ ಇನ್ನೂ ಎರಡು ಬಾರಿ ಲೈಂಗಿಕ ಅಪರಾಧವೆಸಗಿದ್ದಾನೆ. ಇದಾದ ಬಳಿಕ, ತನ್ನ ಕೃತ್ಯದ ಬಗ್ಗೆ ಎಲ್ಲೂ ಬಾಯಿ ಬಿಡದಂತೆ ಸಂತ್ರಸ್ತೆಗೆ ಆರೋಪಿ ಬೆದರಿಸಿದ್ದಾನೆ.

ತನ್ನ ತಾಯಿಯಿಂದ ದೂರ ಓಡಿ ಹೋಗಲು ಯತ್ನಿಸಿದ ಬಾಲಕಿಗೆ ಯಾವುದೇ ಆಶ್ರಯ ಸಿಗದೇ ಅಸಹಾಯಕಳಾಗಿ ತನ್ನ ಮನೆಗೇ ಮರಳಬೇಕಾಗಿ ಬಂದಿದೆ. ಈ ದುರ್ಘಟನೆಯ ಬೆನ್ನಿಗೇ, ತಾನು ಮಾಡಿದ ಅಪರಾಧವನ್ನು ಮುಚ್ಚಿ ಹಾಕಲು ಬಾಲಕಿಯನ್ನು ಯುವಕನೊಬ್ಬನೊಂದಿಗೆ ಮದುವೆ ಮಾಡಲು ಆಕೆಯ ತಾಯಿ ನೋಡಿದ್ದಾಳೆ. ಕೂಡಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ಸಂತ್ರಸ್ತೆ ಸಹಾಯ ಕೋರಿದ್ದಾಳೆ.

ಅಪ್ರಾಪ್ತ ವಯಸ್ಸಿನ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಂಬಂಧಪಟ್ಟ ಕಾನೂನುಗಳ ಅಡಿ ಕ್ರಮ ತೆಗೆದುಕೊಂಡು, ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ. ಬುಧವಾರದಂದು ಬಂಧಿತರನ್ನು ಕೋರ್ಟ್ ಮುಂದೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...