ಧುಲೆ: ವ್ಯಕ್ತಿಯೊಬ್ಬ ಸಹೋದ್ಯೋಗಿಯ ಖಾಸಗಿ ಭಾಗಗಳಿಗೆ ಲೋಹದ ಧೂಳನ್ನು ಸ್ವಚ್ಛಗೊಳಿಸುವ ಏರ್ ಪ್ರೆಶರ್ ಪಂಪ್ ಅನ್ನು ಅಳವಡಿಸಿದ ಕಾರಣ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಧುಲೆಯಲ್ಲಿ ನಡೆದಿದೆ. 20 ವರ್ಷದ ಗುತ್ತಿಗೆ ಕಾರ್ಮಿಕ ಮೃತಪಟ್ಟ ವ್ಯಕ್ತಿ.
ಸಕ್ರಿ ತಹಸಿಲ್‌ನ ನಿಜಾಂಪುರದ ಖಾಸಗಿ ಸಂಸ್ಥೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ತುಷಾರ್ ಸದಾಶಿವ ನಿಕುಂಭ್ ಎಂದು ಗುರುತಿಸಲಾಗಿದೆ.
“ಮೃತ ಯುವಕ ಕೆಲಸ ಮಾಡುತ್ತಿದ್ದ ಸಂಸ್ಥೆಯು ಇಂಟಿಗ್ರೇಟೆಡ್ ಇಂಜಿನಿಯರಿಂಗ್ ಸೇವೆಗಳನ್ನು ಒದಗಿಸುತ್ತದೆ. ಕೆಲಸದ ವಿರಾಮದ ಸಮಯದಲ್ಲಿ, ಸಹೋದ್ಯೋಗಿಯೊಬ್ಬ ಗುದದ್ವಾರದ ಬಳಿ ಹಿಡಿದು ಪಂಪ್ ಒತ್ತಿದ್ದಾನೆ. ಕೂಡಲೇ ಪ್ರಜ್ಞೆ ತಪ್ಪಿ ಬಿದ್ದ ತುಷಾರ್ ಮೃತಪಟ್ಟಿದ್ದಾನೆ.
”ನಿಕುಂಭ್‌ನನ್ನು ಮೊದಲು ನಂದೂರ್‌ಬಾರ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ನೆರೆಯ ಗುಜರಾತ್‌ನ ಸೂರತ್‌ಗೆ ಕರೆದೊಯ್ಯಲಾಯಿತು. ಆದರೆ, ಆಂತರಿಕ ಗಾಯಗಳಿಂದ ಅವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆಯನ್ನು ನಿಜಾಂಪುರ ಪೊಲೀಸರು ನಡೆಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.