ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದ ಹಿನ್ನಲೆಯಲ್ಲಿ ಮಹಾರಾಷ್ಟ್ರ ರಾಜ್ಯಾದ್ಯಂತ ಏಪ್ರಿಲ್ 22 ರಿಂದ 30 ರವರೆಗೆ ಕಠಿಣ ನಿಯಮ ಜಾರಿಗೆ ತರಲಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಶೇಕಡ 15ರಷ್ಟು ಸಿಬ್ಬಂದಿ ಹಾಜರಿರಬೇಕು. ಇಂದು ರಾತ್ರಿ 8 ಗಂಟೆಯಿಂದ ಹೊಸ ನಿರ್ಬಂಧ ಜಾರಿಗೆ ಬರಲಿದೆ. ಮದುವೆ ಸಮಾರಂಭದಲ್ಲಿ 25 ಜನ ಸೇರಲು ಮಾತ್ರ ಅವಕಾಶ ನೀಡಲಾಗಿದೆ. ಅಂತರ ಜಿಲ್ಲಾ ಪ್ರಯಾಣ ಮಾಡಿದರೆ 14 ದಿನ ಕ್ವಾರಂಟೈನ್ ನಲ್ಲಿ ಇರಬೇಕು. ಅಂತರ್ ಜಿಲ್ಲಾ ಸಂಚಾರಕ್ಕೆ ನಿರ್ಬಂಧ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದ್ದು, ಬಸ್ ಗಳಲ್ಲಿ ಶೇಕಡ 50 ರಷ್ಟು ಜನ ಮಾತ್ರ ಪ್ರಯಾಣಿಸಬೇಕು. ನಿಯಮ ಉಲ್ಲಂಘಿಸಿದವರಿಗೆ 10 ರಿಂದ 15 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.