ಒಮಿಕ್ರಾನ್ ಸೋಂಕಿಗೆ ಪೀಡಿತನಾಗಿರುವ ಮಹಾರಾಷ್ಟ್ರದ ಥಾಣೆ ಜಿಲ್ಲೆಯ, 33 ವರ್ಷ ವಯಸ್ಸಿನ ಮೆರೈನ್ ಇಂಜಿನಿಯರ್, ತಮ್ಮ ಕೆಲಸದ ಒತ್ತಡದ ನಡುವೆ ಕೋವಿಡ್ ಲಸಿಕೆ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ.
ಕೋವಿಡ್-19ನ ಎರಡನೇ ಅಲೆಗೆ ದೇಶ ತತ್ತರಿಸಿದ್ದ ಸಂದರ್ಭವಾದ ಏಪ್ರಿಲ್‌ನಿಂದಲೂ ಹಡಗಿನಲ್ಲೇ ಇರುವ ಈ ಇಂಜಿನಿಯರ್, ಕಲ್ಯಾಣ್ ದೊಂಬಿವಲಿ ನಗರಸಭೆ (ಕೆಎಂಡಿಸಿ) ಮೂಲಕ ಲಸಿಕೆ ಪಡೆಯಲು ಮಾಡಿದ ಎಲ್ಲಾ ಯತ್ನಗಳೂ ವಿಫಲವಾಗಿದ್ದವು.
ಚರ್ಮದ ಆರೋಗ್ಯಕ್ಕೆ ರಾಮಬಾಣ ಈ ಐದು ಸೊಪ್ಪುಗಳು
ಕಲ್ಯಾಣ್-ದೊಂಬಿವಲಿ ಪ್ರದೇಶದ ಈತ ದಕ್ಷಿಣ ಆಫ್ರಿಕಾದಿಂದ ದುಬೈ ಮಾರ್ಗವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೂಡಲೇ ಮುಂಬೈಗೆ ಧಾವಿಸಿದ್ದರು. ಈ ವೇಳೆ ಕೋವಿಡ್ ಪರೀಕ್ಷೆಗೆ ಒಳಗಾದ ಈತನಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ಖಾತ್ರಿಯಾಗಿದೆ.
ಈ ಇಂಜಿನಿಯರರನ್ನು ದೊಂಬಿವಲಿಯಲ್ಲಿರುವ ಅವರ ಮನೆಗೆ ಕರೆದೊಯ್ದ ಟ್ಯಾಕ್ಸಿಯ ಚಾಲಕನನ್ನು ಸಹ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಜೊತೆಗೆ ಆತ ವಾಸಿಸುವ ಕಟ್ಟಡದಲ್ಲಿರುವ ಎಲ್ಲಾ ವಾಸಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾರೊಬ್ಬರಿಗೂ ಪಾಸಿಟಿವ್ ವರದಿ ಬಂದಿಲ್ಲ.