
ಮಹಾರಾಷ್ಟ್ರದ ಪುಣೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಐಷಾರಾಮಿ ಪೋರ್ಷೆ ಕಾರು ಬೈಕಿನಲ್ಲಿ ತೆರಳುತ್ತಿದ್ದ ಟೆಕ್ಕಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಅಪ್ರಾಪ್ತನನ್ನು ಬಚಾವ್ ಮಾಡಲು ಇನ್ನಿಲ್ಲದ ಪ್ರಯತ್ನ ನಡೆದಿತ್ತು.
ಅಪಘಾತಕ್ಕೂ ಮುನ್ನ ಪ್ರತಿಷ್ಠಿತ ಕ್ಲಬ್ ಮತ್ತು ಬಾರ್ ನಲ್ಲಿ ಮದ್ಯ ಸೇವಿಸಿದ್ದ ಅಪ್ರಾಪ್ತ ಮತ್ತಿನಲ್ಲಿ ಈ ಅಪಘಾತವೆಸಗಿದ್ದ ಎಂದು ಹೇಳಲಾಗಿದ್ದು, ಆತನ ತಂದೆ ಆಸ್ಪತ್ರೆಯ ವೈದ್ಯರಿಗೆ ಲಂಚ ನೀಡಿ ರಕ್ತದ ಮಾದರಿಯನ್ನೇ ಬದಲಾಯಿಸಿದ್ದ ಸಂಗತಿ ಬಳಿಕ ಬಯಲಾಗಿತ್ತು.
ಇದೀಗ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಗುರುತರ ಆರೋಪ ಒಂದನ್ನು ಮಾಡಿದ್ದು, ಅಪ್ರಾಪ್ತ ಅಪಘಾತವೆಸಗುವ ವೇಳೆ ಆತನ ಜೊತೆ ಕಾರಿನಲ್ಲಿ ಸ್ಥಳೀಯ ಶಾಸಕನ ಪುತ್ರ ಸಹ ಇದ್ದನೆಂದು ಹೇಳಿದ್ದಾರೆ. ಅಲ್ಲದೆ ಸರ್ಕಾರ ಕೂಡಲೇ ಈ ಕುರಿತಂತೆ ಹೆಚ್ಚಿನ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
