ಖ್ಯಾತ ಕ್ರಿಕೆಟಿಗ ‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡೂಲ್ಕರ್ ತಮ್ಮ ಕ್ರೀಡಾ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಹೊಂದಿಲ್ಲ. ಈವರೆಗೆ ಯಾವುದೇ ವಿವಾದಕ್ಕೆ ಸಿಲುಕದೆ ತಮ್ಮ ಸರಳ ನಡತೆಯ ಕಾರಣಕ್ಕೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಇಂತಹ ವ್ಯಕ್ತಿತ್ವವುಳ್ಳ ಸಚಿನ್ ತೆಂಡೂಲ್ಕರ್ ಈಗ ಮತ್ತೊಂದು ಕಾರಣಕ್ಕೆ ಈಗ ಸುದ್ದಿಯಲ್ಲಿದ್ದಾರೆ.
ಹೌದು, ಸಚಿನ್ ತೆಂಡೂಲ್ಕರ್ ಆನ್ ಲೈನ್ ಗೇಮಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದನ್ನು ವಿರೋಧಿಸಿ ಮಹಾರಾಷ್ಟ್ರದ ಶಾಸಕ ಬಚ್ಚು ಕಡು ಮತ್ತವರ ಬೆಂಬಲಿಗರು ಮುಂಬೈನ ಬಾಂದ್ರಾದಲ್ಲಿರುವ ಸಚಿನ್ ತೆಂಡೂಲ್ಕರ್ ನಿವಾಸದ ಎದುರು ಗುರುವಾರದಂದು ಪ್ರತಿಭಟನೆ ನಡೆಸಿದ್ದಾರೆ.
ಯುವಜನತೆಯನ್ನು ಹಾಳು ಮಾಡುತ್ತಿರುವ ಆನ್ಲೈನ್ ಗೇಮಿಂಗ್ ಜಾಹೀರಾತಿನಿಂದ ಸಚಿನ್ ತೆಂಡೂಲ್ಕರ್ ಹಿಂದೆ ಸರಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದು, ಬಳಿಕ ಪೊಲೀಸರು ಶಾಸಕ ಬಚ್ಚು ಕಡು ಸೇರಿದಂತೆ ಇತರ 22 ಮಂದಿಯನ್ನು ತೆಂಡೂಲ್ಕರ್ ನಿವಾಸದ ಬಳಿಯಿಂದ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿ ಎಂದರೆ ಪ್ರಹಾರ್ ಜನಶಕ್ತಿ ಪಕ್ಷದ ಶಾಸಕರಾಗಿರುವ ಬಚ್ಚು ಕಡು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬೆಂಬಲಿಗರಾಗಿದ್ದಾರೆ.