![](https://kannadadunia.com/wp-content/uploads/2021/12/Rape_-iStock-1127458355_43.jpg)
ಪಾಲ್ಘಡ: ಅಣ್ಣನೇ ತಂಗಿಯ ಮೇಲೆ ಅತ್ಯಾಚಾರವೆಸಗಿ, ಆಕೆ ಗರ್ಭಿಣಿಯಾಗುತ್ತಿದ್ದಂತೆ ಗರ್ಭಪಾತ ಮಾಡಿಸಲು ಮುಂದಾಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘದದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಅಪ್ರಾಪ್ತ ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆಕೆಯ ಅಣ್ಣ ಹಾಗೂ ಇನ್ನೋರ್ವ ಸಂಬಂಧಿಯನ್ನು ವೈಸ್ ವಿರಾರ್ ಪೊಲೀಸರು ಬಂಧಿಸಿದ್ದಾರೆ.
16 ವರ್ಷದ ಬಾಲಕಿ ನೀದಿದ ದೂರಿನ ಪ್ರಕಾರ ತನ್ನ ಸಹೋದರ ಹಾಗೂ ಸಂಬಂಧಿ ಸೇರಿ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಗರ್ಭಿಣಿಯಾಗುತ್ತಿದ್ದಂತೆ ಈಗ ಗರ್ಭಪಾತಕ್ಕೆ ಮುಂಬೈನ ಗ್ರ್ಯಾಂಟ್ ರಸ್ತೆಯಲ್ಲಿರುವ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ದೂರು ನೀಡಿದ್ದಾಳೆ.
ಆರೋಪಿಗಳ ವಿರುದ್ಧ ಅತ್ಯಾಚಾರ, ಪೋಕ್ಸೋ ಕೇಸ್, ಸಂತ್ರಸ್ತೆ ಒಪ್ಪಿಗೆ ಇಲ್ಲದೇ ಗರ್ಭಪಾತ ಯತ್ನ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.