ಮಳೆಗಾಲ ಪೂರ್ತಿ ಮನೆಯಲ್ಲಿ ಕುಳಿತಿದ್ದ ಮಹಾರಾಷ್ಟ್ರದ ಪಾಲ್‍ಘರ್‍ನ ಮೀನುಗಾರ ಚಂದ್ರಕಾಂತ್ ತಾರೆಗೆ ಅದೃಷ್ಟ ಕಾಯುತ್ತಿತ್ತು.
ಆತ ಮುರ್ಬಿ ಗ್ರಾಮದಲ್ಲಿ ಸಾಗರಕ್ಕೆ ಈ ಬಾರಿ ಮಳೆಗಾಲದಲ್ಲಿಯೇ ಮೊದಲ ಶಿಕಾರಿಗೆ ಇಳಿದಾಗ, ಬರೋಬ್ಬರಿ 150 ಘೋಲ್ ಮೀನುಗಳು ಬಲೆಗೆ ಬಿದ್ದಿದ್ದವು.
ಆಸ್ಟ್ರೇಲಿಯಾ ಮೀನುಗಾರರಿಗೆ ಸಿಕ್ತು ಅಪರೂಪದ ಫಿಷ್
ಅತ್ಯಂತ ರುಚಿಕರ ಮತ್ತು ಅಪರೂಪದ ತಳಿಯ ಮೀನುಗಳಿವು. ಔಷಧಿಗಳ ತಯಾರಿಕೆಯಲ್ಲಿ ಈ ಮೀನುಗಳ ವಿವಿಧ ಭಾಗಗಳನ್ನು ಬಳಸಲಾಗುತ್ತದೆ. ಹಾಗಾಗಿಯೇ ಈ ಮೀನಿಗೆ ಬಂಗಾರದ ಮೌಲ್ಯವಿದೆ. ಇದನ್ನು ‘ ಚಿನ್ನದ ಹೃದಯದ ಮೀನು’ ಎಂದು ಮೀನುಗಾರರು ಗುರುತಿಸುತ್ತಾರೆ. ವಿದೇಶಗಳಲ್ಲಿ ಈ ಮೀನಿಗೆ ಭಾರಿ ಬೇಡಿಕೆ ಇದೆ. ಸೀದಾ ದಡಕ್ಕೆ ತಂದು ಘೋಲ್ ಮೀನುಗಳನ್ನು ಹರಾಜು ಇಟ್ಟ ಚಂದ್ರಕಾಂತ್‍ಗೆ ಸಿಕ್ಕಿದ್ದು ಬರೋಬ್ಬರಿ 1.3 ಕೋಟಿ ರೂ.!
ಹೌದು, ಒಂದೇ ದಿನದಲ್ಲಿ ಈ ಮೀನುಗಾರ ಕೋಟ್ಯಧೀಶನಾಗಿ ಬಿಟ್ಟಿದ್ದ. ಘೋಲ್ ಮೀನಿನ ಹೊಟ್ಟೆಯ ಒಳಗಿರುವ ಸಣ್ಣ ಚೀಲಕ್ಕೆ ವಿದೇಶಗಳಲ್ಲಿ ಚಿನ್ನದ ಮೌಲ್ಯವಿದೆಯಂತೆ.