ಮಹಾರಾಷ್ಟ್ರ: ಆಶ್ಚರ್ಯಕರ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ತನ್ನ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ಖುದ್ದು ಪತಿಯೇ ಸಹಾಯ ಮಾಡಿದ್ದಾನೆ. ತನ್ನ ಪತ್ನಿ ಬಲವಂತದಿಂದ ತನ್ನನ್ನು ಮದುವೆಯಾಗಿರುವ ವಿಷಯ ತಿಳಿದ ಪತಿ, ಆಕೆಯ ಪ್ರಿಯಕರನ ಜೊತೆ ಹೋಗಲು ಸಹಾಯ ಮಾಡಿದ್ದಾರೆ.
ಮಹಾರಾಷ್ಟ್ರದ ಬೀಚ್ಕಿಲಾ ಗ್ರಾಮದ ನಿವಾಸಿ ಸನೋಜ್ ಕುಮಾರ್ ಸಿಂಗ್ ಮೇ 10 ರಂದು ಪ್ರಿಯಾಂಕಾ ಕುಮಾರಿ ಅವರನ್ನು ವಿವಾಹವಾಗಿದ್ದಾರೆ. ಅವರ ಮದುವೆಯಾದ ಕೆಲವು ದಿನಗಳ ನಂತರ, ಪ್ರಿಯಾಂಕಾ ಸಾಕಷ್ಟು ಅತೃಪ್ತಿ ಹೊಂದಿದ್ದನ್ನು ಸನೋಜ್ ಗಮನಿಸಿದರು. ನಂತರ ಆಕೆ ತನ್ನ ಗ್ರಾಮದ ಜಿತೇಂದ್ರ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿಯಿತು.
ಪ್ರಿಯಾಂಕಾ ಮತ್ತು ಜಿತೇಂದ್ರ ಕಳೆದ 10 ವರ್ಷಗಳಿಂದ ಸಂಬಂಧ ಹೊಂದಿದ್ದರು. ಆದರೆ, ಜಾತಿ ಭೇದದ ಕಾರಣ ಇಬ್ಬರ ಮದುವೆ ಸಾಧ್ಯವಾಗಿರಲಿಲ್ಲ. ತನ್ನ ಪ್ರೇಮಿಯಿಂದ ಬೇರ್ಪಟ್ಟ ಬಗ್ಗೆ ಅತೃಪ್ತಿ ಹೊಂದಿದ್ದ ವಧು ಸನೋಜ್ ಜೊತೆಗಿನ ಮದುವೆಯಾದ 20 ದಿನಗಳ ನಂತರ ಜಿತೇಂದ್ರನೊಂದಿಗೆ ಓಡಿಹೋಗಲು ನಿರ್ಧರಿಸಿದಳು. ಆದರೆ, ಓಡಿಹೋಗಲು ಯತ್ನಿಸುತ್ತಿದ್ದ ಅವರನ್ನು ಗ್ರಾಮಸ್ಥರು ಹಿಡಿದು ಮಾನಾಟು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಕೂಡಲೇ ಮಧ್ಯೆ ಪ್ರವೇಶಿಸಿರುವ ಪತಿ, ಈ ವಿಷಯ ತಿಳಿದು ಜೋಡಿಯನ್ನು ಒಂದು ಮಾಡಿದ್ದು, ಇದು ಶ್ಲಾಘನೆಗೆ ಕಾರಣವಾಗಿದೆ.