ಮಹಾರಾಷ್ಟ್ರ, ಪಶ್ಚಿಮ ಘಟ್ಟ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪಶ್ಚಿಮ ಘಟ್ಟಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ವರುಣಾರ್ಭಟಕ್ಕೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ರಾಜಾಪುರ ಪಟ್ಟಣ ಸಂಪೂರ್ಣ ಮುಳುಗಡೆಯಾಗಿದೆ.
ರಾಜಾಪುರ ನಗರಕ್ಕೆ ನಗರವೇ ಜಲಾವೃತಗೊಂಡಿದ್ದು, ಮನೆಗಳು, ಅಂಗಡಿ ಮುಗ್ಗಟ್ಟು, ಕಟ್ಟಡಗಳು ಸಂಪೂರ್ಣ ಮುಳುಗಡೆಯಾಗಿವೆ. ರಸ್ತೆಗಳು, ಬೀದಿಗಳಲ್ಲಿ ಪ್ರವಾಹದ ನೀರು ರಭಸವಾಗಿ ಹರಿಯುತ್ತಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಆಟೋ, ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಮನೆಗಳು ಮುಕ್ಕಾಲು ಭಾಗ ಮುಳುಗಡೆಯಾಗಿದ್ದು, ಅಂಗಡಿ, ಶೆಡ್ ಗಳು, ಗ್ಯಾರೇಜ್ ಗಳ ಛಾವಣಿಗಳು ಮಾತ್ರ ಕಾಣುತ್ತಿವೆ. ರಣಭೀಕರ ಮಳೆಯಿಂದಾಗಿ ನಗರಕ್ಕೆ ನಗರವೇ ಜಲಾವೃತಗೊಂಡಿದೆ. ಮನೆಗಳಿಗೆ ನೀರು ನುಗ್ಗಿದ್ದಂರಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹಲವರನ್ನು ಸ್ಥಳಾಂತರಿಸುವ ಕೆಲಸ ನಡೆದಿದೆ. ಆದರೆ ಊಟ-ಆಹಾರ ವ್ಯವಸ್ಥೆ ಸರಿಯಾಗಿ ಇಲ್ಲದೇ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ರಾಯಘಡದ ಪಾನ್ವೆಲ್, ಸಾವಂತವಾಡಿ, ಸತಾರದಲ್ಲಿ ಮಳೆಯ ಅಬ್ಬರಕ್ಕೆ ರಸ್ತೆಗಳು ನದಿಯಂತಾಗಿದ್ದು, ಪ್ರವಾಹದಂತೆ ನೀರು ರಭಸವಾಗಿ ಹರಿದು ಬರುತ್ತಿವೆ.