ಮಹಾರಾಷ್ಟ್ರದ ಶಿವಸೇನೆ – ಬಿಜೆಪಿ ನೇತೃತ್ವದ ಸರ್ಕಾರ ವಿಶ್ವಾಸ ಮತ್ತು ಯೋಚನೆಯಲ್ಲಿ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಬಹುಮತ ಯಾಚನೆ ಮಾಡಿದ ವೇಳೆ 164 ಮತಗಳು ಲಭಿಸಿವೆ.
ಸ್ಪೀಕರ್ ನಾರ್ವೆಕರ್, ಮೊದಲು ಧ್ವನಿ ಮತದ ವಿಶ್ವಾಸಮತಕ್ಕೆ ಸೂಚನೆ ನೀಡಿದ್ದು ಪ್ರತಿಪಕ್ಷಗಳು ಮತಗಳ ವಿಭಜನೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅದಕ್ಕೆ ಮನ್ನಣೆ ನೀಡಲಾಯಿತು.
ಬಹುಜನ ಸಮಾಜ ಪಾರ್ಟಿ ಹಾಗೂ ಎಐಎಂಐಎಂ ಶಾಸಕರುಗಳು ಮತದಾನದಿಂದ ಹೊರಗುಳಿದರೆ ಮಹಾ ವಿಕಾಸ್ ಅಘಾಡಿಯ ಎಂಟು ಮಂದಿ ಶಾಸಕರು ಗೈರು ಹಾಜರಾಗಿದ್ದರು.
ಉದ್ಧವ್ ಠಾಕ್ರೆ ಸರ್ಕಾರದಲ್ಲಿ ಸಚಿವರಾಗಿದ್ದ ಏಕನಾಥ್ ಶಿಂಧೆ 39 ಶಾಸಕರೊಂದಿಗೆ ಬಂಡಾಯವೆದ್ದ ಪರಿಣಾಮ ‘ಮಹಾ ವಿಕಾಸ ಅಘಾಡಿ’ ಸರ್ಕಾರ ಪತನಗೊಂಡಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯಪಾಲರ ಸೂಚನೆ ಮೇರೆಗೆ ಅವರು ಇಂದು ತಮ್ಮ ಸರ್ಕಾರದ ಬಹುಮತ ಸಾಬೀತುಪಡಿಸಿದ್ದಾರೆ.