
ಮಹಾರಾಷ್ಟ್ರದ ಜಲಗಾಂವ್‌ನ ವ್ಯಕ್ತಿಯೊಬ್ಬನಿಗೆ ಪೊಲೀಸರು ಥಳಿಸಿದ ವಿಡಿಯೋ ಇದಾಗಿದೆ. ಅಸಲಿಗೆ ಆಗಿದ್ದೇನೆಂದರೆ, ಈತ ತನ್ನ ಮಗನ ಪರೀಕ್ಷಾ ಹಾಲ್‌ಗೆ ಕಾಪಿ ಚಿಟ್‌ಗಳನ್ನು ಹಸ್ತಾಂತರಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಹೀಗೆ ಚಿಟ್ ಕೊಟ್ಟರೆ ಮಗ ಉತ್ತೀರ್ಣನಾಗಬಹುದು ಎಂದು ಕಾಪಿಗೆ ಅಪ್ಪನೇ ಸಹಕಾರ ಮಾಡಲು ಹೋಗಿ ಅರೆಸ್ಟ್ ಆಗಿದ್ದಾನೆ.
ಸಿಕ್ಕಿಬಿದ್ದ ತಕ್ಷಣ ಇಬ್ಬರು ಪೊಲೀಸರು ಲಾಠಿಯಿಂದ ಥಳಿಸಿದ್ದಾರೆ. ಈ ವಿಡಿಯೋ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇಬ್ಬರು ಪೊಲೀಸರು ಆ ವ್ಯಕ್ತಿಯನ್ನು ಬಲವಾಗಿ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆತ ನೆಲಕ್ಕೆ ಬೀಳುತ್ತಾನೆ. ಬಿದ್ದ ನಂತರವೂ ಪೊಲೀಸ್ ಅಧಿಕಾರಿ ಹೊಡೆಯುವುದನ್ನು ನಿಲ್ಲಿಸುವುದಿಲ್ಲ.