ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗುರುವಾರ ರಾಜ್ಯದ ಎಲ್ಲಾ ಜಿಲ್ಲಾ ಅಧಿಕಾರಿಗಳಿಗೆ ತಮ್ಮ ಭೇಟಿಯ ಸಮಯದಲ್ಲಿ ಯಾರೂ ಹೂಮಾಲೆ ಅಥವಾ ಹೂಗುಚ್ಛಗಳನ್ನು ತರಬಾರದು ಎಂದು ಆದೇಶಿಸಿದ್ದಾರೆ. ಸಿಎಂಗೆ ಪೊಲೀಸರು ನೀಡುವ ಗೌರವ ರಕ್ಷೆಯ ಸಂಪ್ರದಾಯವನ್ನು ನಿಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡುವಾಗ ಪುಷ್ಪಗುಚ್ಛ ನೀಡಬಾರದು. ಪೊಲೀಸ್ ಪಡೆ ನೀಡುವ ಗೌರವ ರಕ್ಷಕ ಸಂಪ್ರದಾಯವನ್ನು ನಿಲ್ಲಿಸಲು ಆದೇಶವನ್ನು ನೀಡಿದ್ದಾರೆ. ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಮುಖ್ಯಮಂತ್ರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಕಾಸ್ ಖರ್ಗೆ ಹೊರಡಿಸಿದ ಅಧಿಸೂಚನೆಯನ್ನು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ಪೊಲೀಸ್ ಕಮಿಷನರ್/ಪೊಲೀಸ್ ಅಧೀಕ್ಷಕರಿಗೆ ತಿಳಿಸಲಾಗಿದೆ.