
ಅಂತರ್ಜಾಲದಲ್ಲಿ ಕಾಣಿಸಿಕೊಂಡಿರುವ ಫೋಟೋದಲ್ಲಿ, ಎಸ್‌ಪಿ ನಾಯಕ ಫಹಾದ್ ಅಹ್ಮದ್ ಮಳೆಯ ನಡುವೆ ಮಹಾ ವಿಕಾಸ್ ಅಘಡಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಸುಪ್ರಿಯಾ ಸುಳೆ ಅವರಿಗೆ ತಲೆಯ ಮೇಲೆ ಛತ್ರಿ ಹಿಡಿದು ನಿಂತಿದ್ದಾರೆ.
ಫಹಾದ್ ಅಹ್ಮದ್ ತಮ್ಮ ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ನೆಟ್ಟಿಗರು ಫೋಟೋನ ಭಾರೀ ಟ್ರೋಲ್ ಮಾಡ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಂಬೈನ ಚೆಂಬೂರಿನ ಅನುಶಕ್ತಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಫಹಾದ್ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ಮಾತುಗಳು ಕೇಳಿಬರುತ್ತಿವೆ.
ಫಹಾದ್ ಛತ್ರಿ ಹಿಡಿಯುವುದಕ್ಕಷ್ಟೇ ಅರ್ಹರು ಎಂದು ಕೆಲವರು ಕ್ರೂರವಾಗಿ ಟ್ರೋಲ್ ಮಾಡಿದರೆ ಹಲವರು ಅವರ ಪತ್ನಿ ನಟಿ ಸ್ವರಾ ಅವರನ್ನೂ ಟ್ರೋಲ್ ಮಾಡಿದ್ದಾರೆ.