ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಘಾಟ್ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪರಾಗ್ ಶಾ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪರಾಗ್ ಅವರ ಒಟ್ಟು ಸ್ವತ್ತು ಮೌಲ್ಯ ಕಳೆದ ಐದು ವರ್ಷದಲ್ಲಿ ಶೇಕಡ 575ರಷ್ಟು ಹೆಚ್ಚಳವಾಗಿದೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಅವರು ಸಲ್ಲಿಸಿದ ಅಫಿಡರವಿಟ್ ಪ್ರಕಾರ ಅವರ ಬಳಿಯಲ್ಲಿ 550.62 ರೂ, ಮೌಲ್ಯದ ಸ್ವತ್ತು ಇತ್ತು. ಈ ಬಾರಿ ಅವರು ಸಲ್ಲಿಸಿದ ಅಫಿಡವಿಟ್ ನಲ್ಲಿ 3315.52 ಕೋಟಿ ರೂ. ಚರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಅವರ ಸ್ಥಿರಾಸ್ತಿ ಮೌಲ್ಯ 67.53 ಕೋಟಿ ರೂಪಾಯಿಯಷ್ಟು ಇದೆ. ರಾಜಕೀಯ ಪ್ರವೇಶಕ್ಕೆ ಮೊದಲು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರು ಮಾಡಿದ್ದ ಅವರು 2017ರಲ್ಲಿ ಬಿಜೆಪಿ ಟಿಕೆಟ್ ನಿಂದ ಪಾಲಿಕೆಯ ಕೌನ್ಸಿಲರ್ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.