ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರ ರಚನೆಯ ಪ್ರಯತ್ನದ ನಡುವೆಯೇ ಸಿಎಂ ಏಕನಾಥ್ ಶಿಂಧೆ ಅವರ ಆರೋಗ್ಯ ಹದಗೆಟ್ಟಿದೆ.
ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹುಟ್ಟೂರಾದ ಸತಾರಾದಲ್ಲಿದ್ದು, ಶನಿವಾರ ಜ್ವರದಿಂದ ಆರೋಗ್ಯ ಹದಗೆಟ್ಟಿದೆ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅವರು ತಮ್ಮ ಸ್ವಗ್ರಾಮಕ್ಕೆ ಬಂದ ನಂತರ ಅನಾರೋಗ್ಯಕ್ಕೆ ಒಳಗಾದರು. ಇದು ವೈರಲ್ ಸೋಂಕು, ಆದ್ದರಿಂದ, ಅವರಿಗೆ ಸ್ವಲ್ಪ ಕೆಮ್ಮು ಮತ್ತು ಶೀತವಿದೆ ಎಂದು ವೈದ್ಯರು ಹೇಳಿದ್ದಾರೆ,
ಶಿಂಧೆಗೆ ಅನಾರೋಗ್ಯದ ಕಾರಣ ಮುಂಬೈನಲ್ಲಿ ತನ್ನ ಎಲ್ಲಾ ಸಭೆಗಳನ್ನು ರದ್ದುಗೊಳಿಸಿದ್ದಾರೆ. ಮಹಾಯುತಿ ಸರ್ಕಾರದಲ್ಲಿ ಅವರ ಮುಂದಿನ ಪಾತ್ರದ ಬಗ್ಗೆ ಸಸ್ಪೆನ್ಸ್ ಮುಂದುವರೆದಿದೆ.