ಹೊರ ಜಗತ್ತಿನೊಂದಿಗೆ ಸಂಪರ್ಕ ಚೆನ್ನಾಗಿರದ ಊರುಗಳಿಗೆ ಡ್ರೋನ್ ಮೂಲಕ ಕೋವಿಡ್ ಲಸಿಕೆಗಳನ್ನು ತಲುಪಿಸುವ ಅಭಿಯಾನಕ್ಕೆ ಮಹಾರಾಷ್ಟ್ರದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಪ್ರದೀಪ್ ವ್ಯಾಸ್ ಚಾಲನೆ ನೀಡಿದ್ದಾರೆ.
ಪಾಲ್ಗರ್‌ನ ಜವಾಹರ್ ತಾಲೂಕಿನ ಕುಗ್ರಾಮವೊಂದಕ್ಕೆ ಲಸಿಕೆಗಳನ್ನು ತಲುಪಿಸಲು ಈ ಹಿಂದೆ ಒಂದು ಗಂಟೆ ತೆಗೆದುಕೊಳ್ಳುತ್ತಿದ್ದಿದ್ದು ಈಗ ಡ್ರೋನ್‌ನಿಂದಾಗಿ ಹತ್ತೇ ನಿಮಿಷಗಳಲ್ಲಿ ಆಗಿ ಹೋಗಿದೆ. ಜಿಲ್ಲಾಧಿಕಾರಿ ಮಾಣಿಕ್ ಗುರ್ಸಾಲ್ ಈ ಪ್ರಯೋಗದ ವೇಳೆ ಕೈಜೋಡಿದ್ದು, ಈ ರೀತಿ ಮಾಡುತ್ತಿರುವುದು ರಾಜ್ಯದಲ್ಲೇ ಮೊದಲ ಬಾರಿಯಾಗಿದೆ ಎಂದಿದ್ದಾರೆ.
ವ್ಯಾಪಕವಾಗಿ ಪಸರುತ್ತಿದ್ದರೂ ಒಮಿಕ್ರಾನ್ ಅಷ್ಟು ತೀವ್ರವಾಗಿಲ್ಲವೇಕೆ….? ಹೀಗಿದೆ ತಜ್ಞ ವೈದ್ಯರು ನೀಡುವ ಕಾರಣ
ಜವ್ಹಾರ್‌ನಿಂದ ಜ಼ಾಪ್ ಗ್ರಾಮಕ್ಕೆ ಡ್ರೋನ್ ಮೂಲಕ ಮೊದಲ ಹಂತದಲ್ಲಿ 300 ಲಸಿಕೆಗಳನ್ನು ಸಾಗಾಟ ಮಾಡಲಾಗಿದೆ.
ಜವ್ಹಾರ್‌ನ ಗುಡ್ಡಗಾಡು ಪ್ರದೇಶಗಳಲ್ಲಿ ಕಾಡುಗಳ ನಡುವೆ ಇರುವ ಊರುಗಳಿಗೆ ಮದ್ದುಗಳನ್ನು ತಲುಪಿಸಲು ಗಂಟೆಗಳು ಬೇಕಾಗುತ್ತವೆ, ಆದರೆ ಡ್ರೋನ್‌ನಿಂದಾಗಿ ಇದು ನಿಮಿಷಗಳ ಕೆಲಸವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿನೂತನ ಅಭಿಯಾನಕ್ಕೆ ಚಾಲನೆ ಕೊಟ್ಟ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, “ಆಧುನಿಕ ತಂತ್ರಜ್ಞಾನವನ್ನು ಜನಸಾಮಾನ್ಯರ ಲಾಭಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ,” ಎಂದಿದ್ದಾರೆ.