ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಮತ್ತೆ ಪುಂಡಾಟ ನಡೆಸಿದೆ. ಕೊಲ್ಲಾಪುರ ಬಸ್ ನಿಲ್ದಾಣದಲ್ಲಿ ಪುಂಡಾಟ ನಡೆಸಿದ ಶಿವಸೇನೆ ಕಾರ್ಯಕರ್ತರು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್ ಮೇಲೆ ಮರಾಠಿ ಬರಹ ಬರೆದಿದ್ದಾರೆ.
ಜೈ ಮಹಾರಾಷ್ಟ್ರ ಎಂದು ಬಸ್ ಮೇಲೆ ಮರಾಠಿಯಲ್ಲಿ ಬರಹ ಬರೆಯಲಾಗಿದೆ. ಕೊಲ್ಲಾಪುರ ಜಿಲ್ಲೆಯ ಶಿವಸೇನೆ ಅಧ್ಯಕ್ಷನ ನೇತೃತ್ವದಲ್ಲಿ ಈ ರೀತಿ ಬರೆಯಲಾಗಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೇ, ನಿಲ್ದಾಣದಿಂದ ಕೆಎಸ್ಆರ್ಟಿಸಿ ಬಸ್ ವಾಪಸ್ ಕಳುಹಿಸಿ ಪುಂಡಾಟಿಕೆ ತೋರಲಾಗಿದೆ ಎನ್ನಲಾಗಿದೆ.