
ಕೊಲ್ಲಾಪುರ: ನದಿ ದಾಟುವಾಗ ಬೋಟ್ ಮಗುಚಿ ಬಿದ್ದು ಇಬ್ಬರು ಕಮಾಂಡೋಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಘಡ್ ತಾಲೂಕಿನ ಹಾಜಗೋಳಿ ಬಳಿ ನಡೆದಿದೆ.
ವಿಜಯ್ ಕುಮಾರ್ (28) ಹಾಗೂ ದಿವಾಕರ್ ರಾಯ್ (26) ಮೃತರು. ತಿಲಾರಿ ಡ್ಯಾಂ ಹಿನ್ನೀರಿನಲ್ಲಿ ತರಬೇತಿಗೆ ತೆರಳಿದ್ದ 6 ಕಮಂಡೋಗಳು ನದಿ ದಾಟುತ್ತಿದ್ದಾಗ ಏಕಾಏಕಿ ಬೋಟ್ ಮಗುಚಿ ಬಿದ್ದಿದೆ. ಇಬ್ಬರು ಕಮಾಂಡೋಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಉಳಿದ ನಾಲ್ವರು ನದಿಯಲ್ಲಿ ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಜೆ ಎಲ್ ವಿಂಗ್ ಕಮಾಂಡ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.