ಮುಂಬೈ: ದೇಶಾದ್ಯಂತ ಕೊರೋನಾ ಎರಡನೇಯ ಅಲೆ ಅಬ್ಬರ ಜೋರಾಗಿದ್ದು, ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಗಿ ಚಿಕಿತ್ಸೆ ನೀಡುವುದು ಸವಾಲಾಗಿದೆ.
ಸೋಂಕಿತರಿಗೆ ಜೀವ ದ್ರವ್ಯವೆಂದು ಹೇಳಲಾದ ರೆಮ್ ಡೆಸಿವಿರ್ ಕೊರತೆ ಕಂಡು ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಕಲಿ ಇಂಜೆಕ್ಷನ್ ಮಾರಾಟಕ್ಕೆ ಮುಂದಾಗಿದ್ದಾರೆ.
ಮಹಾರಾಷ್ಟ್ರದ ಬಾರಾಮತಿಯಲ್ಲಿ ನಕಲಿ ರೆಮ್ ಡೆಸಿವಿರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ರೆಮ್ ಡೆಸಿವಿರ್ ಎಂದು ಹೆಸರಿಸಲಾದ ಇಂಜೆಕ್ಷನ್ ನನ್ನು ಪ್ಯಾರಸಿಟಮಾಲ್ ನಿಂದ ದ್ರವರೂಪದಲ್ಲಿ ತುಂಬಿಸಲಾಗಿತ್ತು ಎಂದು ಪುಣೆ ಗ್ರಾಮಾಂತರ ಉಪ ಪೊಲೀಸ್ ಅಧೀಕ್ಷಕ ನಾರಾಯಣ ಶಿರಾಗಾಂವ್ಕರ್ ತಿಳಿಸಿದ್ದಾರೆ.