
ಘಟನೆಗೆ ಸಂಬಂಧಿಸಿದಂತೆ, ಆರೋಪಿಯನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ. ಮಾಡಿರುವ ತಪ್ಪಿಗೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಮುಖ್ಯ ಮಂತ್ರಿ ಉದ್ಧವ್ ಠಾಕ್ರೆ ಮಗ ಸಚಿವ ಆದಿತ್ಯ ಠಾಕ್ರೆ ಟ್ವೀಟ್ ಮಾಡಿದ್ದಾರೆ.
ಭಾರತೀಯ ಅರಣ್ಯ ಸೇವಾ ಅಧಿಕಾರಿ ಪ್ರವೀಣ್ ಅಂಗುಸಾಮಿ ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ ಹಲ್ಲೆಯ ವಿಡಿಯೋಗೆ ಪ್ರತಿಕ್ರಿಯಿಸಿರುವ ಆದಿತ್ಯ ಠಾಕ್ರೆ, ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದ್ದಾರೆ.
ದೇಶದ ಜನತೆಗೆ ಗುಡ್ ನ್ಯೂಸ್: ಮೆಡಿಕಲ್ ಸ್ಟೋರ್ ನಲ್ಲೂ ಕೊರೋನಾ ಲಸಿಕೆ ಲಭ್ಯ
ಪಶ್ಚಿಮ ಮಹಾರಾಷ್ಟ್ರ ಜಿಲ್ಲೆಯ ಪಾಲ್ಸವಾಡೆ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಸ್ಥಳೀಯ ಅರಣ್ಯ ನಿರ್ವಹಣಾ ಸಮಿತಿಯ ಸದಸ್ಯರಾಗಿರುವ ಮಾಜಿ ಸರಪಂಚ್ ಮತ್ತು ಅವರ ಪತ್ನಿ ಮಹಿಳಾ ಅರಣ್ಯ ಸಿಬ್ಬಂದಿಗೆ ಥಳಿಸಿದ್ದಾರೆ. ಆಕೆ ಗರ್ಭಿಣಿ ಎಂದು ತಿಳಿದರು ಅಮಾನುಷವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.
ಥಳಿತಕ್ಕೊಳಗಾಗಿರುವ ಮಹಿಳಾ ಅರಣ್ಯ ಸಿಬ್ಬಂದಿ ಅನುಮತಿಯಿಲ್ಲದೆ ತನ್ನೊಂದಿಗೆ ಗುತ್ತಿಗೆ ಅರಣ್ಯ ಕಾರ್ಮಿಕರನ್ನು ಕರೆದೊಯ್ದಿದ್ದಕ್ಕಾಗಿ ಬಂಧಿತನಾಗಿರುವ ಆರೋಪಿ ಕೋಪಗೊಂಡು ಆಕೆ ಗರ್ಭಿಣಿಯಾಗಿದ್ದರೂ ಸಾರ್ವಜನಿಕರ ಮುಂದೆ ಮಣ್ಣಿನಲ್ಲಿ ಎಳೆದಾಡಿ ಥಳಿಸಿದ್ದಾನೆ. ಅವರ ಪತ್ನಿಯು ಈ ಸಂದರ್ಭದಲ್ಲಿ ಆಕೆಗೆ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.