
ಇಂದು ನಡೆಯುತ್ತಿರುವ ಮಹಾರಾಜ ಟ್ರೋಪಿಯ ಏಳನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ಮುಖಾಮುಖಿಯಾಗಿದ್ದು, ಹುಬ್ಬಳ್ಳಿ ಟೈಗರ್ಸ್ ನಾಯಕ ಮನೀಶ್ ಪಾಂಡೆ ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡದಲ್ಲಿ ಆರಂಭಿಕ ಆಟಗಾರರಾದ ಭುವನ್ ರಾಜು ಕೇವಲ 11 ರನ್ ಗಳಿಸಿ ರನ್ ಔಟ್ ಆದರೆ ಜೆಸ್ವಂತ್ ಆಚಾರ್ಯ ಏಳು ರನ್ ಗಳಿಸಿದ್ದು, ಪ್ರವೀಣ್ ದುಬೆಗೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ.
ನಾಯಕ ಮಯಾಂಕ್ ಅಗರ್ವಾಲ್ ಅರ್ಧಶತಕ ಸಿಡಿಸುವ ಮೂಲಕ ತಮ್ಮ ತಂಡಕ್ಕೆ ನೆರವಾಗಿದ್ದಾರೆ. ಮಯಂಕ್ ಅಗರ್ವಾಲ್ ಹೊರತುಪಡಿಸಿ ಯಾವ ಬ್ಯಾಟ್ಸ್ಮನ್ಗಳಿಂದಲೂ ಉತ್ತಮ ಪ್ರದರ್ಶನ ದೊರೆಯಲಿಲ್ಲ.
ಮನ್ವಂತ್ ಕುಮಾರ್ ಅವರ ಬೌಲಿಂಗ್ ಗೆ ತತ್ತರಿಸಿ ಹೋಗಿದ್ದಾರೆ. ಒಟ್ಟಾರೆ ನಾಲ್ಕು ವಿಕೆಟ್ ಗಳನ್ನು ಈ ಪಂದ್ಯದಲ್ಲಿ ಮನ್ವಂತ್ ಕುಮಾರ್ ಪಡೆದುಕೊಂಡಿದ್ದು, ಒಟ್ಟಾರೆ ಹುಬ್ಬಳ್ಳಿ ಟೈಗರ್ಸ್ ಗೆ ಗೆಲ್ಲಲು ಕೇವಲ 106 ರನ್ ಗಳು ಬೇಕಾಗಿದೆ.