ಬೆಂಗಳೂರು : ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಮುಕ್ತಿ ರಂಜನ್ ರಾಯ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಆತನ ಡೆತ್ ನೋಟ್ ಪತ್ತೆಯಾಗಿದೆ.
ಏನಿದೆ ಡೆತ್ ನೋಟ್ ನಲ್ಲಿ..?
ಸೆಪ್ಟೆಂಬರ್ 3 ರಂದು ನಾನು ಬೆಂಗಳೂರಿನ ಮಹಾಲಕ್ಷ್ಮಿ ಮನೆಗೆ ಹೋಗಿದ್ದೆ, ಆಕೆ ನನ್ನ ಜೊತೆ ಜಗಳ ಮಾಡುತ್ತಿದ್ದಳು. ಸೆ. 3 ರಂದು ಮಹಾಲಕ್ಷ್ಮಯನ್ನು ಹತ್ಯೆ ಮಾಡಿದ್ದೇನೆ ಎಂದು ಮುಕ್ತಿ ರಂಜನ್ ರಾಯ್ ಡೆತ್ ನೋಟ್ ನಲ್ಲಿ ಬರೆದಿದ್ದಾನೆ.
ಮಹಾಲಕ್ಷ್ಮಿ ನನ್ನ ಮೇಲೆ ಹಲ್ಲೆ ನಡೆಸಿದ್ದರಿಂದ ಸಿಟ್ಟಿನಿಂದ ಆಕೆಯನ್ನು ಹತ್ಯೆ ಮಾಡಿದ್ದೇನೆ. ವೈಯಕ್ತಿಕ ವಿಚಾರಗಳಿಗೆ ಜಗಳ ನಡೆಯಿತು. ಕೊಲೆ ನಡೆದ ಬಳಿಕ ದೇಹವನ್ನು 59 ಪೀಸ್ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿದ್ದೇನೆ ಎಂದಿ ರಂಜನ್ ರಾಯ್ ಡೆತ್ ನೋಟ್ ನಲ್ಲಿ ಬರೆದಿದ್ದಾನೆ.
ಬೆಂಗಳೂರಿನ ವೈಯಾಲಿಕಾವಲ್ ಪ್ರದೇಶದ ಮೂರು ಅಂತಸ್ತಿನ ಮನೆಯ ಮೊದಲ ಮಹಡಿಯಲ್ಲಿ ಮಹಾಲಕ್ಷ್ಮಿ ವಾಸಿಸುತ್ತಿದ್ದರು. ಸೆಪ್ಟೆಂಬರ್ 21 ರಂದು ಫ್ರಿಜ್ ನಲ್ಲಿ ಆಕೆಯ ದೇಹದ ತುಂಡುಗಳು ಪತ್ತೆಯಾಗಿದ್ದವು.ಒಡಿಶಾದ ಭದ್ರಕ ಜಿಲ್ಲೆ ದುಶಿರಿ ಠಾಣೆ ವ್ಯಾಪ್ತಿಯ ಬೂಯಕಪುರದ ಬಳಿ ಮುಕ್ತಿ ರಂಜನ್ ರಾಯ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಫಂಡಿ ಗ್ರಾಮದ ಮನೆಗೆ ಹೋಗಿದ್ದ ಆತ ಕೆಲ ಕಾಲ ಮನೆಯಲ್ಲಿದ್ದ. ನಿನ್ನೆ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದ ಬೈಕ್ ನಲ್ಲಿ ಲ್ಯಾಪ್ ಟಾಪ್ ಇಟ್ಟು ಬೆಳಗ್ಗೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮಹಾಲಕ್ಷ್ಮಿ ಕೊನೆಯದಾಗಿ ಸೆಪ್ಟೆಂಬರ್ 1 ರಂದು ಕೆಲಸಕ್ಕೆ ಹಾಜರಾಗಿದ್ದರು. ಸೆಪ್ಟೆಂಬರ್ 2 ರಿಂದ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಆಕೆಯ ಕುಟುಂಬ ಹೇಳಿದೆ. ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಫ್ರಿಜ್ನಲ್ಲಿ ತುಂಬಲಾಗಿತ್ತು, ಇದನ್ನು ಆಕೆಯ ತಾಯಿ ಮತ್ತು ಹಿರಿಯ ಸಹೋದರಿ ಸೆಪ್ಟೆಂಬರ್ 21 ರಂದು ವೈಯಾಲಿಕಾವಲ್ ಮನೆಯಲ್ಲಿ ಪತ್ತೆ ಮಾಡಿದ್ದರು.