ತಿರುಮಲ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯಲಿದೆ.
ಕುಂಭಮೇಳದಲ್ಲಿ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಕೃತಿ ಮಾದರಿ ಸ್ಥಾಪಿಸಲು ತಿರುಪತಿ ತಿರುಮಲ ದೇವಾಲಯ ಆಡಳಿತ ಮಂಡಳಿ(ಟಿಟಿಡಿ) ನಿರ್ಧರಿಸಿದೆ.
ಈ ಸಂಬಂಧ ಟಿಟಿಡಿ ಆರೋಗ್ಯ ಮತ್ತು ಶಿಕ್ಷಣ ವಿಭಾಗದ ಜೆಇಒ ಗೌತಮಿ ಅವರು ಕುಂಭಮೇಳದ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಕುಂಭಮೇಳದ ಅಧಿಕಾರಿಗಳು ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದ ಪ್ರತಿಕೃತಿ ನಿರ್ಮಿಸಲು ಆರನೇ ಸೆಕ್ಟರ್ ನಲ್ಲಿ 2.5 ಎಕರೆ ಜಾಗವನ್ನು ಮಂಜೂರು ಮಾಡಿದ್ದಾರೆ. ಕುಂಭಮೇಳದ ಅಧಿಕಾರಿಗಳು ಟಿಟಿಡಿ ಅಧಿಕಾರಿಗಳೊಂದಿಗೆ ತಿರುಮಲ ಮಂದಿರ ನಿರ್ಮಾಣ ಮಾಡಲಿರುವ ಜಾಗವನ್ನು ಪರಿಶೀಲಿಸಿದ್ದು, ಅಗತ್ಯ ವ್ಯವಸ್ಥೆಗಳ ಕುರಿತಾಗಿ ಚರ್ಚೆ ನಡೆಸಿದ್ದಾರೆ.