ಪ್ರಯಾಗ್ರಾಜ್ನಲ್ಲಿ 45 ದಿನಗಳ ಕಾಲ ನಡೆದ ಮಹಾ ಕುಂಭಮೇಳ ಇಂದಿಗೆ ಮುಕ್ತಾಯವಾಗಿದ್ದು, 12 ವರ್ಷಗಳಿಗೊಮ್ಮೆ ನಡೆಯುವ ಈ ಭವ್ಯ ಹಬ್ಬದಲ್ಲಿ ಹಲವಾರು ಸ್ಮರಣೀಯ ಘಟನೆಗಳು ನಡೆದವು. ಜನವರಿ 13 ರಂದು ಆರಂಭವಾದ ಈ ಕಾರ್ಯಕ್ರಮವು ಅಭೂತಪೂರ್ವ 64 ಕೋಟಿ ಭಕ್ತರನ್ನು ಆಕರ್ಷಿಸಿತು.
ಪ್ರತಿ ಭಕ್ತರು ತಮ್ಮದೇ ಆದ ವಿಶಿಷ್ಟ ಕಥೆಗಳು, ಸಂಪ್ರದಾಯಗಳು ಮತ್ತು ಅನುಭವಗಳನ್ನು ತಂದರು. ಹಾಸ್ಯದ ಘಟನೆಗಳಿಂದ ಹಿಡಿದು ರೂಪಾಂತರದ ಸ್ಪೂರ್ತಿದಾಯಕ ಕಥೆಗಳವರೆಗೆ, ಮಹಾ ಕುಂಭವು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ ಹಲವಾರು ವೈರಲ್ ಕ್ಷಣಗಳನ್ನು ಕಂಡಿದೆ.
ಮೋನಾಲಿಸಾ ಭೋಸ್ಳೆ, ‘ಮಹಾ ಕುಂಭಮೇಳ ಹುಡುಗಿ’ ಎಂದೇ ಖ್ಯಾತರಾದರು. ಐಐಟಿ ಬಾಬಾ, ಏರೋಸ್ಪೇಸ್ ಎಂಜಿನಿಯರಿಂಗ್ ತೊರೆದು ಆಧ್ಯಾತ್ಮಕ್ಕೆ ಬಂದರು. ಬಾಬಾ ರಾಮದೇವ್ ಅವರ ಹೇರ್ ಫ್ಲಿಪ್, ಮಮತಾ ಕುಲಕರ್ಣಿ ಮಹಾಮಂಡಲೇಶ್ವರ ನೇಮಕಾತಿ, ರಿಮೋಟ್ ‘ಮಹಾ ಕುಂಭ’ ಸ್ನಾನಕ್ಕಾಗಿ ಮಹಿಳೆ ಗಂಗಾ ನದಿಯಲ್ಲಿ ಸ್ಮಾರ್ಟ್ಫೋನ್ ಮುಳುಗಿಸಿದ್ದು, ಮಹಾಕುಂಭದಲ್ಲಿ ಚಹಾ ಮಾರಾಟ ಮಾಡಿ ದಿನಕ್ಕೆ 5,000 ರೂ. ಲಾಭ ಗಳಿಸಿದ ವ್ಯಕ್ತಿ, ನಿಗೂಢ ಹ್ಯಾರಿ ಪಾಟರ್ ಹೋಲುವ ವ್ಯಕ್ತಿ, ದಂಪತಿ ಬೈಕ್ನಲ್ಲಿ 1,200 ಕಿ.ಮೀ. ದೂರದ ಪ್ರಯಾಣ. ಆಧ್ಯಾತ್ಮಕ್ಕಾಗಿ 3,000 ಕೋಟಿ ರೂ. ಸಾಮ್ರಾಜ್ಯ ತ್ಯಜಿಸಿದ ‘ವ್ಯಾಪಾರಸ್ಥ ಬಾಬಾ’ ವೃದ್ಧನ ಹಾಸ್ಯಮಯ ದೂರು, ಟ್ರಾಫಿಕ್ ಅನ್ನು ಮಿನಿ-ಮೇಳವಾಗಿ ಪರಿವರ್ತಿಸುವುದು, ಮಕ್ಕಳ ಸುರಕ್ಷತೆಗಾಗಿ ವೈಯಕ್ತಿಕ ವಿವರಗಳನ್ನು ಲೇಬಲ್ ಮಾಡಿದ ಪೋಷಕರು ಕುಂಭಮೇಳದ ವೈರಲ್ ಕ್ಷಣಗಳಾಗಿದ್ದವು.
ಕುಂಭಮೇಳದಲ್ಲಿ ಆಧ್ಯಾತ್ಮಿಕತೆಯೊಂದಿಗೆ ಮನರಂಜನೆಯೂ ಇತ್ತು. ಭಕ್ತರು ಪವಿತ್ರ ಸ್ನಾನ ಮಾಡಿ, ಆಧ್ಯಾತ್ಮಿಕ ಗುರುಗಳ ಆಶೀರ್ವಾದ ಪಡೆದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆಗಳು, ಕೀರ್ತನೆಗಳು ಭಕ್ತರನ್ನು ರಂಜಿಸಿದವು.
ಕುಂಭಮೇಳವು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿಂಬಿಸುತ್ತದೆ. ಈ ಮೇಳವು ಭಕ್ತರ ನಂಬಿಕೆ ಮತ್ತು ಭಕ್ತಿಯನ್ನು ತೋರಿಸುತ್ತದೆ. ಕುಂಭಮೇಳವು ಭಾರತದ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾಗಿದೆ.
इनसे मिलिए ये हैं महाकुंभ मेला में माला बेचने वाली वायरल गर्ल मोनालिसा..
इनकी आंखे बहुत सुंदर है..
इसको कहते हैं किस्मत बदलते देर नहीं लगती..#महाकुम्भ_अमृत_स्नान #महाकुंभ2025 #MahaKumbhMela2025 pic.twitter.com/w4ohGTCa7z— प्रिया..🇮🇳🚩🚩 (@ipriyasharma21) January 17, 2025
View this post on Instagram
View this post on Instagram
View this post on Instagram
View this post on Instagram