
ಮಂಡ್ಯ: ಕಂಕಣ ಭಾಗ್ಯಕ್ಕಾಗಿ ರೈತ ಯುವಕರು ಮಹದೇಶ್ವರ ಬೆಟ್ಟಕ್ಕೆ ಪಾದಚಾತ್ರೆ ತೆರಳಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ರೈತ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಹೀಗಾಗಿ ಕಂಕಣ ಭಾಗ್ಯಕ್ಕಾಗಿ ಹೆಣ್ಣು ಸಿಗಲೆಂದು ಹರಕೆ ಹೊತ್ತು 15 ಜನ ಯುವಕರು ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ.
ಮಂಡ್ಯ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬ್ರಹ್ಮಚಾರಿಗಳು ಪಾದಯಾತ್ರೆ ಹೊರಟಿದ್ದಾರೆ. ಅವ್ವೇರಹಳ್ಳಿ ಗ್ರಾಮದಲ್ಲಿಯೇ ಅತಿ ಹೆಚ್ಚು ಅವಿವಾಹಿತರಿದ್ದಾರೆ. ಯಾರಿಗೂ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.